ಗುರುಪುರ ಬಿಜೆಪಿ ಬೆಂಬಲಿತ ಜನಪ್ರತಿನಿದಿಗಳ ಸಭೆ

ಕೈಕಂಬ: ಕಾಂಗ್ರೆಸ್ ಅದಿಕಾರಕ್ಕೆ ಬಂದು ವರ್ಷ ಕಳೆದರು ಅಭಿವೃದ್ಧಿಯ ಕಡೆಗೆ ಗಮನ ಕೊಡದೆ ಇತರ ಪಕ್ಷದವರನ್ನು ಟೀಕಿಸುವುದರಲ್ಲೆ ಕಾಲಹರಣ ಮಾಡುತ್ತದೆ ಎಂದು ಮಾಜಿ ಶಾಸಕ ಕೃಷ್ಣ ಜೆ ಪಾಲೆಮಾರ್ ಹೇಳಿದರು. ಅವರು ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಸುಳ್ಳು ಆಶ್ವಾಸನೆಯನ್ನು ನೀಡಿ ಜನರಿಗೆ ವಂಚನೆ ಮಾಡಲಾಗಿದೆ. ಕಾಂಗ್ರೆಸ್ ಅಪಪ್ರಚಾರದಿಂದ ಮತ ಪಡೆಯಲು ಪ್ರಯತ್ನಿಸುತ್ತದೆ. ಅದಕ್ಕೆ ನಾವು ಆಶ್ಪದ ಕೊಡದೆ ನಮ್ಮ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಅವರನ್ನುಗೆಲ್ಲಿಸಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಜವಬ್ಧಾರಿ ನಮ್ಮ ಮೇಲಿದೆ. ನಮ್ಮ ಕಾರ್ಯಕರ್ತರು ಎಲ್ಲಾ ಮನೆಮನೆಗೆ ತರಳಿ ಮತದರರನ್ನು ಸಂಪರ್ಕಿಸಿ ನಾವು ಮಾಡಿದ ಆಭಿವೃದ್ಧಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು. ಅವರು ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ವಲಯದ ಬಿಜೆಪಿ ಬೆಂಬಲಿತ ಜಿಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಸಭೆಯು ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಮಾ.೨೬ ಬುಧವಾರ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಉತ್ತರ ಮಂಡಲ ಅಧ್ಯಕ್ಷ ರಮೇಶ್ ಎಸ್ ವಹಿಸಿದ್ದರು. ಮಾಜಿ ಶಾಸಕ ಕೃಷ್ಣ ಜೆ ಪಾಲೆಮಾರ್ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ರಾಜೇಶ್‌ಕೊಟ್ಟಾರಿ,ಬಾಸ್ಕರ ಸಾಲಿಯಾನ್,ರುಕ್ಮಯ ನಾಯಕ್, ರೂಪೇಶ್ ಅಧ್ಯಪಾಡಿ ಮತ್ತಿತರರು ಭಾಗವಹಿಸಿದ್ದರು.Kaikamba 31031402 Kaikamba 31031403

Vaman Poojary

Comments

comments

Comments are closed.

Read previous post:
ತುಳು ಭಾಷಾಂತರ ಕಾರ್ಯಾಗಾರ

ಮೂಲ್ಕಿ: ದ್ರಾವಿಡ ಬಾಷೆಗಳಲ್ಲಿ ಅತೀ ಪುರಾತನವಾದ ತುಳು ಬಾಷೆಯು ಅತೀ ಸಂಕೀರ್ಣ ಲಿಪಿಯನ್ನು ಹೊಂದಿದ್ದು ಅದರ ತಿಳುವಳಿಕೆ ಬಾಷಾ ಜ್ಞಾನ ಹೆಚ್ಚಿಸಲು ಪೂರಕ ಎಂದು ಹಿರಿಯ ಸಾಹಿತಿ...

Close