ಕಿನ್ನಿಗೋಳಿ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ವಿರೋಧ ಪಕ್ಷಗಳು ಸುಳ್ಳುಗಳ ಸರಮಾಲೆಯನ್ನು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೇಸ್‌ನ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದೆ. ಸರಕಾರದ ಜನಪರ ಸಮಾಜ ಉಪಯೋಗಿ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನದಟ್ಟು ಮಾಡಿ ಕಾಂಗ್ರೇಸ್‌ಗೆ ಮತ ಕೇಳಬೇಕು ಎಂದು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಕಿನ್ನಿಗೋಳಿಯ ರಾಜಾಂಗಣ ಸಭಾಭವನದಲ್ಲಿ ನಡೆದ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಕಿನ್ನಿಗೋಳಿ ವಲಯದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮೂಲ್ಕಿ ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಅಕಾರಕ್ಕೆ ಬಂದ ನಂತರ ೩೬ ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳ ಡಾಮರೀಕರಣ ಹಾಗೂ ಅಭಿವೃದ್ಧಿ ಕಾರ್ಯ ಹಂತ ಹಂತವಾಗಿ ನಡೆಯುತ್ತಿದೆ. ೧೮ ಕೋಟಿ ವೆಚ್ಚದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ಯೋಜನೆ ಹಾಗೂ ೨೬ ಕೋಟಿ ವೆಚ್ಚದ ಮಳವೂರು ವೆಂಟೆಡ್ ಡ್ಯಾಮ್ ಕುಡಿಯುವ ನೀರಿನ ಯೋಜನೆ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಕಾಂಗ್ರೇಸ್ ಮುಖಂಡ ಗುಣಪಾಲ ಶೆಟ್ಟಿ , ಮಾಜಿ ಜಿ. ಪಂ. ಸದಸ್ಯೆ ಶಾಲೆಟ್ ಪಿಂಟೋ, ಕಿನ್ನಿಗೋಳಿ ವಲಯದ ಕಾಂಗ್ರೇಸ್ ಅಧ್ಯಕ್ಷ ಜೊಸ್ಸಿಪಿಂಟೊ, ತಾ. ಪಂ. ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಹೆಗ್ಡೆ , ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-04041409

Comments

comments

Comments are closed.

Read previous post:
ಶ್ರೀ ನಾರಾಯಣಗುರು ಇಂಗ್ಲಿಷ್ ಪುಸ್ತಕ ಬಿಡುಗಡೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಭಾರತೀಯ ಸಾಂಪ್ರದಾಯಿಕ ತಿಳುವಳಿಕೆಯನ್ನು ಪ್ರಶ್ನಿಸಿ ಶೂದ್ರ ವರ್ಗಕ್ಕೆ ವಿದ್ಯೆ ಮತ್ತು ಸಂಘಟನೆಗಾಗಿ ಹೋರಾಡಿದರು, ಅವರ ತತ್ವಗಳು ಮತ್ತು ಅವರುತೋರಿದ ಬೆಳಕಿನ ಹಿನ್ನೆಲೆಯಲ್ಲಿ...

Close