ಶಿಕ್ಷಣಕ್ಕೆ ಉತ್ತಮ ಪ್ರ್ರೊತ್ಸಾಹ ನೀಡಿ

ಮೂಲ್ಕಿ: ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಘಟನೆ ಹಾಗೂ ಗ್ರಾಮೀಣ ಬಡವರ್ಗದ ವಿದ್ಯಾರ್ಥಿಗಳಿಗೆ ಸಹಕಾರ, ಶಿಕ್ಷಣಕ್ಕೆ ಉತ್ತಮ ಪ್ರ್ರೊತ್ಸಾಹ ನೀಡಿ ಎಂದು ಡಾ.ಹರಿಪ್ರಸಾದ್ ಶೆಟ್ಟಿ ಹೇಳಿದರು.
ಮೂಲ್ಕಿ ಕೆ.ಎಸ್.ರಾವ್ ನಗರ ಸರಕಾರಿ ಪ್ರೌಡ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಕೆ.ಭಾಗ್ಯಚಂದ್ರ ರವರನ್ನು ಸನ್ಮಾನಿಸಿ ಮಾತನಾಡಿದರು.
ವಾಘ್ಮಿಯಾದ ಉತ್ತಮ ವ್ಯಕ್ತಿತ್ವದ ಭಾಗ್ಯಚಂದ್ರರು ಪಡುಬಿದ್ರಿ, ಕೈಪುಂಜಾಲು,ಚಿತ್ರಾಪು,ಕೃಷ್ಣಾಪುರ,ಬಡಗ ಎಕ್ಕಾರು,ಸದಾಶಿವ ರಾವ್ ನಗರ ದಲ್ಲಿ ಸೇವೆ ಸಲ್ಲಿಸಿ ಕಾಟಿಪಳ್ಳ ಕ್ಲಷ್ಟರ್ ಸಮೂಹ ಶಿಕ್ಷಣಾಧಿಕಾರಿಯಾಗಿ ಮತ್ತು ಬಡಗ ಎಕ್ಕಾರು,ಕೃಷ್ಣಾಪುರ ಮತ್ತು ಸದಾಶಿವ ರಾವ್ ನಗೆದಲ್ಲಿ ಸ್ಥಾಪಕ ಮುಖ್ಯಾಪಾದ್ಯಾಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ಶಾಲಾಭಿವೃದ್ಧಿ ಸಮಿತಿಯ ಜನಾರ್ದನ ಬಂಗೇರಾ, ಇದಿನಬ್ಬ, ಭೀಮಾ ಶಂಕರ್, ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಸುಮತಿ ಬಾ, ಅದ್ಯಾಪಕ ವೃಂದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-04041404Bhagyawan Sanil

Comments

comments

Comments are closed.