ಬಿಜೆಪಿ ಮಹಿಳಾ ಸಮಾವೇಶ

ಕಿನ್ನಿಗೋಳಿ : ವಾಜಪೇಯಿ ಸರ್ಕಾರವಿದ್ದಾಗ ಅಡುಗೆ ಅನಿಲ ಸಹಿತ ಅವಶ್ಯಕ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುತ್ತಿತ್ತು. ಆದರೆ ಇಂದು ಗಗನಕ್ಕೇರಿರುವ ಬೆಲೆಯಿಂದಾಗಿ ಮಹಿಳೆಯರು ಕಂಗಾಲಾಗಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿದೆ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದೆ. ಇದು ಸರಕಾರದ ಆಡಳಿತ ವೈಫಲ್ಯಕ್ಕೆ ಕನ್ನಡಿಯಂತಿದೆ ಎಂದು ಚಿತ್ರ ನಟಿ ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದರು.
ಶುಕ್ರವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Kinnigoli-04041407

ಕರಾವಳಿಯಲ್ಲಿ ಮಾಲಿನ್ಯ ರಹಿತ ಪರಿಸರ ಪ್ರೇಮಿ ಔದ್ಯೋಗಿಕ ತಂತ್ರಜ್ಞಾನದ ಯೋಜನೆಗಳನ್ನು ಸ್ವಾಗತಿಸೋಣ ಆದರೆ ಪರಿಸರ ಮಾರಕ ಯೋಜನೆಗಳಿಗೆ ನನ್ನ ಸ್ಪಷ್ಟ ವಿರೋಧವಿದೆ, ನರೇಂದ್ರ ಮೋದಿಯ ಪರಿಕಲ್ಪನೆಯು ಇದೇ ಆಗಿದೆ. ತನಗೆ ಕರಾವಳಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿದ ಸಾರ್ಥಕ ಭಾವನೆ ಇದೆ ವಿರೋಧಿಗಳ ಯಾವುದೇ ಟೀಕೆಗೂ ಉತ್ತರಿಸುವುದಿಲ್ಲ ಬದಲಾಗಿ ನನ್ನ ಪ್ರಾಮಾಣಿಕತೆ ಮತ್ತು ಹಾಗೂ ಸಜ್ಜನ ರಾಜಕಾರಣವನ್ನು ಜನತೆಯ ಮುಂದಿಟ್ಟಿದ್ದೇನೆ, ಯೋಜನೆಗಳನ್ನು ಅನುಷ್ಠಾನ ತಂದು ರಾಜ್ಯದ ಅಗ್ರಸ್ಥಾನದ ಸಂಸದನಾಗಿರುವ ಸ್ಥಾನದಲ್ಲಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಭಾವನೆ ಮೂಡಿದೆ . ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ಇನ್ನಷ್ಟು ಅಭಿವೃದ್ಧಿಗೆ ಪೂರಕವಾಗಿ ಬಿಜೆಪಿಯನ್ನು ಮಹಿಳೆಯರು ಬೆಂಬಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ಹೇಳಿದರು.

ಈ ಸಂದರ್ಭ ಮೆನ್ನಬೆಟ್ಟು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಜೆಡಿಎಸ್‌ನ ಸಾವಿತ್ರಿ ಶೆಟ್ಟಿ, ನಿಡ್ಡೋಡಿ ಜೆಡಿಎಸ್‌ನ ಸುಜಾತ, ಕಾಂಗ್ರೆಸ್‌ನ ರುಕ್ಮಿಣಿ ಅವರನ್ನು ಬಿಜೆಪಿ ಪಕ್ಷಕ್ಕೆ ಚಿತ್ರ ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಬಿಜೆಪಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಸುಲೋಚನ್ ಭಟ್, ರಾಜ್ಯ ಕಾರ್ಯದರ್ಶಿ ಪ್ರಭಾ ಮಾಲಿನಿ, ದ.ಕ. ಬಿ.ಜೆಪಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡರಾದ ಕೆ. ಭುವನಾಭಿರಾಮ ಉಡುಪ, ಕೆ.ಪಿ.ಜಗದೀಶ ಅಧಿಕಾರಿ, ಕೆ.ಆರ್.ಪಂಡಿತ್, ಮಾಜಿ ಸಚಿವ ನಾಗರಾಜ ಶೆಟ್ಟಿ, ದ.ಕ ಜಿ.ಪಂ. ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಬಿಜೆಪಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಮೂಡಬಿದ್ರೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿಗಾರ್, ಜಿಪಂ. ಸದಸ್ಯರಾದ ಈಶ್ವರ ಕಟೀಲು, ಸುನೀತಾ ಸುಚರಿತ ಶೆಟ್ಟಿ, ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯರಾದ ವಜ್ರಾಕ್ಷಿ ಶೆಟ್ಟಿ, ಬೇಬಿ ಸುಂದರ ಕೋಟ್ಯಾನ್, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-04041405
ಕಟೀಲು ದೇವಳಕ್ಕೆ ಚಿತ್ರನಟಿ ತಾರಾ ಭೇಟಿ

ಕಿನ್ನಿಗೋಳಿ: ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ವಿಧಾನ ಪರಿಷತ್ ಸದಸ್ಯೆ ತಾರಾ ಶುಕ್ರವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್‌ಕುಟುಂಬವು ಸ್ವಂತ ನಿರ್ಧಾರದಿಂದ ರಾಜಕೀಯಕ್ಕೆ ಬಂದಿದೆ. ರಾಜಕೀಯ...

Close