ಮುಲ್ಕಿ ಒಕ್ಕೂಟ ಪದಗ್ರಹಣ ಸಮಾರಂಭ

ಮೂಲ್ಕಿ: ಗ್ರಾಮೀಣ ಬಡ ವರ್ಗದ ಮಹಿಳೆಯರನ್ನು ಸಂಘಟಿಸಿ ಸ್ವಾವಲಂಭಿಗಳನ್ನಾಗಿ ಆರ್ಥಿಕ ಸಡೃಡತೆ ಕಂಡುಕೊಳ್ಳುವಂತೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಅಭಿನಂದನೀಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ನಡೆದ ಮುಲ್ಕಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿದ್ದರು.
ಯೋಜನೆಯ ಪ್ರಗತಿ ನಿಧಿ ನಿರ್ದೇಶಕ ಸಂಪತ್ ಕುಮಾರ್, ಕಾರ್ನಾಡು ಹರಿಹರ ಕ್ಷೇತ್ರ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಅರ್ಚಕ ಶ್ರೀಪತಿ ಉಪಾದ್ಯಾಯ, ಕೇಂದ್ರ ಒಕ್ಕೂಟ ಆಲ್ವಿನ್.ಎಪ್.ಡಿಸೋಜಾ  ಇಕ್ಬಾಲ್ ಅಹ್ಮದ್ ಮೂಲ್ಕಿ ಉಪಸ್ಥಿತರಿದ್ದರು.

ವಲಯಗಳ ನೂತನ ಅಧ್ಯಕ್ಷರಾಗಿ ಹೇಮಂತ್(ಮೂಲ್ಕಿ), ಅರುಣಾ(ಚಿತ್ರಾಪು), ಚೇತನ್(ಕಿಲ್ಪಾಡಿ), ಪ್ರಭಾ(ಅತಿಕಾರಿಬೆಟ್ಟು) ಶರೀಫ್(ಶಿಮಂತೂರು), ಗೀತಾ(ಕೆ.ಎಸ್.ರಾವ್ ನಗರ-ಎ), ಉಮೈಬಾನು (ಕೆ.ಎಸ್.ರಾವ್ ನಗರ-ಬಿ), ರಮಣಿ(ಕಾರ್ನಾಡು), ರವಿಕಲಾ(ಬೆಳ್ಳಾಯೂರು), ರತ್ನಾ(ಪಡುಪಣಂಬೂರು), ಅನಿಲ್ ಇಂದಿರಾನಗರ, ಜಯಂತಿ(ಹಳೆಯಂಗಡಿ), ಶೈಲಜ(ಸಸಿಹಿತ್ಲು), ಪುಷ್ಪರಾಜ ಶೆಟ್ಟಿ(ಸುರತ್ಕಲ್-ಮದ್ಯ), ವಸಂತ ಕುಲಾಲ್(ಚೆಳಾರ್) ಪದಗ್ರಹಣ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸಾದಕ ಗೋಪೀನಾಥ ಪಡಂಗರವರನ್ನು ಸನ್ಮಾನಿಸಲಾಯಿತು.

ಹರಿಶ್ಚಂದ್ರ.ಎಸ್.ಕೋಟ್ಯಾನ್ ಸ್ವಾಗತಿಸಿದರು, ವಸಂತ ಕುಮಾರ್ ವಂದಿಸಿದರು, ಸುರತ್ಕಲ್ ವಲಯದ ಮೇಲ್ವಿಚಾರಕ ದಿನೇಶ್ ನಿರೂಪಿಸಿದರು.

Kinnigoli-04041405 Kinnigoli-04041406

 Bhagyavan Sanil

Comments

comments

Comments are closed.

Read previous post:
ಶಿಕ್ಷಣಕ್ಕೆ ಉತ್ತಮ ಪ್ರ್ರೊತ್ಸಾಹ ನೀಡಿ

ಮೂಲ್ಕಿ: ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಘಟನೆ ಹಾಗೂ ಗ್ರಾಮೀಣ ಬಡವರ್ಗದ ವಿದ್ಯಾರ್ಥಿಗಳಿಗೆ ಸಹಕಾರ, ಶಿಕ್ಷಣಕ್ಕೆ ಉತ್ತಮ ಪ್ರ್ರೊತ್ಸಾಹ ನೀಡಿ ಎಂದು ಡಾ.ಹರಿಪ್ರಸಾದ್ ಶೆಟ್ಟಿ ಹೇಳಿದರು. ಮೂಲ್ಕಿ ಕೆ.ಎಸ್.ರಾವ್...

Close