ನರೇಂದ್ರ ಮೋದಿ ಸುಳ್ಳಿನ ಸರದಾರ

ಕಿನ್ನಿಗೋಳಿ : ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಮಹಾ ಸುಳ್ಳಿನ ಸರದಾರ ಗುಜರಾತಿನಲ್ಲಿ ಅಭಿವೃದ್ಧಿಯಾಗಿಯೇ ಇಲ್ಲ ಕೇವಲ ಅಭಿವೃದ್ಧಿ ಎಂಬ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದ್ದಾರೆ. ಎಂದು ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು
ಬುಧವಾರ ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಹರಿನಾರಾಯಣದಾಸ ಆಸ್ರಣ್ಣ ಪ್ರಸಾದ ನೀಡಿದರು.
ಗುಜರಾತಿನಲ್ಲಿ ಅಭಿವೃದ್ಧಿ ಆಗಿದೆ ಎಂದು ಹೇಳುವ ಮೋದಿಯವರ ಹಿಂದಿನ ಬಜೆಟ್‌ಗಳಲ್ಲಿ ಇದ್ದ ಅಂಕಿ ಅಂಶಗಳು ಹೆಚ್ಚಿನ ಏರುಪೇರುಗಳು ಕಂಡು ಬಂದಿಲ್ಲ. ಗುಜರಾತಿನಲ್ಲಿ ನಿರುದ್ಯೋಗ ಕಡಿಮೆ ಎಂದು ಹೇಳಲಾಗುತ್ತಿದೆ ಆದರೇ ೧೫೦೦ ಹುದ್ದೆಗೆ ೧೩ ಲಕ್ಷ ಅರ್ಜಿಗಳು ಬಂದಿವೆ ಇದು ಎಂತಹ ಅಭಿವೃದ್ಧಿ ಎಂದು ನೀವೇ ಊಹೆ ಮಾಡಿ ಇದು ಎಲ್ಲಾ ಬರೀ ನಾಟಕ ಎಂದು ಪೂಜಾರಿ ವ್ಯಂಗ್ಯ ಮಾಡಿದರು.
ರೈತರಿಗೆ ಎಲ್ಲಾ ಮೂಲ ಸೌಕರ್ಯ ನೀಡಲಾಗಿದೆ ಎಂದು ಹೇಳುವ ಮೋದಿ ಕಳೆದ ಸಾಲಿನಲ್ಲಿ ಸಾಲದ ಬಾಧೆಯಲ್ಲಿ ಹಲವಾರು ರೈತರು ಆತ್ಯಹತ್ಯೆ ಮಾಡಿಕೊಂಡವರ ಬಗ್ಗೆ ಏನೆನೆನ್ನುತ್ತಾರೆ? ರೈತರ ಉಚಿತ ವಿದ್ಯುತ್ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದು ಹಲವಾರು ರೈತ ಕುಟುಂಬಗಳು ಬೀದಿಪಾಲಾಗಿವೆ. ಎಂದರು.

ನಿಡ್ಡೋಡಿ ಯೋಜನೆಯ ಬಗ್ಗೆ ಭಯ ಪಡಬೇಕಾಗಿಲ್ಲ
ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರದ ವಿರುದ್ಧ ಗ್ರಾಮ ಪಂಚಾಯಿತಿಗಳು ಹಾಗೂ ಜನರು ಜಿಲ್ಲಾಧಿಕಾರಿ ಮೂಲಕ ಅಫಿದಾವತ್ ಹಾಕಿದಾಗ ಅಲ್ಲದೆ ಶೇಕಡಾ ೮೦% ಜನರು ಸ್ಥಾವರವನ್ನು ವಿರೋಧಿಸಿದರೆ sಯೋಜನೆಯೇ ರದ್ದಾಗುತ್ತದೆ. ಎಂದು ಹೇಳಿದರು.

ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ , ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ಮೋನಪ್ಪ ಶೆಟ್ಟಿ ಎಕ್ಕಾರು, ಮಾಜಿ ತಾ. ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್, ನವೀನ್ ಪಿ. ಸನಿಲ್ ಕಟೀಲ್, ಸಾಹುಲ್ ಹಮೀದ್, ಪ್ರೇಮನಾಥ ಶೆಟ್ಟಿ ಮಿತ್ತಬಲ್, ಡೋಲ್ಪಿ ಸಂತುಮಾಯೂರ್, ಚಂದ್ರಹಾಸ ದೇವರಗುಡ್ಡೆ , ಗಣೇಶ್ ಆಚಾರ್ಯ, ಸೂರಜ್ ಕೊಂಡೇಲ, ವಿಜಯ್ ಕೊಂಡೇಲ, ರಾಘು ಉಲ್ಲಂಜೆ, ಬಾಲಕೃಷ್ಣ ಉಲ್ಲಂಜೆ, ಪ್ರೇಮ್ ಕಿಲೆಂಜೂರು, ರಮೇಶ್ ಕಟೀಲು, ಹರಿಶ್ಚಂದ್ರ ರಾವ್, ವಿಜಯ್ ಎಕ್ಕಾರು, ಸದಾಶಿವ ಆಜಾರು, ನಾರಾಯಣ ಶೆಟ್ಟಿ ಅಜಾರು, ಸುನಿಲ್ ಸಿಕ್ವೇರಾ, ಹರೀಶ್ ಮತ್ತಿತರರಿದ್ದರು.

ಪೂಜಾರಿ ಬಿದ್ದಿದ್ದಾರೆ ಅವರನ್ನು ಎಬ್ಬಿಸಿ
ಈ ಹಿಂದೆ ರಾಜಕೀಯವಾಗಿ ಸಾಮಾಜಿಕವಾಗಿ ಹಲವಾರು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಆದರೆ ಈಗ ಪೂಜಾರಿ ಬಿದ್ದಿದ್ದಾರೆ ಮತ್ತೆ ಎಬ್ಬಿಸಿ ಲೋಕಸಭೆಗೆ ಕಳುಹಿಸುವ ಕೆಲಸ ಜಿಲ್ಲೆಯ ಮತದಾರನದ್ದು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಪೂಜಾರಿ ಮತ್ತು ಮೋದಿ ಮದ್ಯೆ ಹಣಾಹಣಿ ಮಾತ್ರ ನಳಿನ್‌ಗೂ ನನಗೂ ಅಲ್ಲ ಬಿಜೆಪಿಗರು ಮೋದಿ ಹೆಸರಿನಲ್ಲಿ ಮತ ಕೇಳುತ್ತಾರೆ ಅದಕ್ಕೆ ಜನರೇ ತಕ್ಕ ಉತ್ತರ ನೀಡಬೇಕು ಎಂದರು.

Kinnigoli-04041403 Kinnigoli-04041404

 

Comments

comments

Comments are closed.

Read previous post:
ದೇಂದಡ್ಕ ದೇವಳ ಚಪ್ಪರ ಮುಹೂರ್ತ

ಕಿನ್ನಿಗೋಳಿ: ಅತಿಕಾರಿಬೆಟ್ಟು ಗ್ರಾಮದ ದೇಂದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಎಪ್ರಿಲ್ 27 ರಿಂದ ಮೇ9 ರವರೆಗೆ ನಡೆಯಲಿದ್ದು ಇದರ ಪ್ರಯುಕ್ತ...

Close