ಉಚಿತ ವ್ಯಕ್ತಿತ್ವ ವಿಕಸನ ಶಿಬಿರ

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಜಾಗೃತಿಗೊಳಿಸಿ ಸ್ವಾವಲಂಭಿಗಳಾಗಿ ನಾಯಕತ್ವ ಗುಣಗಳನ್ನು ಹೆಚ್ಚಿಸಲು ಬೇಸಿಗೆ ಶಿಭಿರಗಳು ಬಹು ಸಹಕಾರಿಯಾಗುತ್ತದೆ ಎಂದು ಮೂಲ್ಕಿ ನಾರಾಯಣಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಹೇಳಿದರು.
ಮೂಲ್ಕಿ ರೋಟರಿ ಚಾರಿಟೇಬಲ್ ಟ್ರಸ್ಟ್ ದಶಮಾನೋತ್ಸವ ಪ್ರಯುಕ್ತ ಮೂಲ್ಕಿ ಪರಿಸರದ ವಿದ್ಯಾರ್ಥಿಗಳಿಗಾಗಿ 5 ದಿನಗಳ ಕಾಲ ನಡೆಯುವ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗೆ ಸಹಕಾರಿಯಾಗುವ ವಿವಿಧ ತರಬೇತಿಗಳು ಉತ್ತಮ ಸಂಪನ್ಮೂಲ ವ್ಯಕ್ತಿಗಳೊಂದಿಗೆ ನಡೆಯುವ ಸಂದರ್ಭ ವಿದ್ಯಾರ್ಥಿಗಳು ತಮ್ಮನ್ನಯ ಸಂಪೂರ್ಣವಾಗಿ ತೊಡಗಿಸಿಕೊಂಡು ಶಿಬಿರದ ಸಂಪೂರ್ಣ ಲಾಭ ಗಳಿಸಿಕೊಳ್ಳಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಅಬ್ದುಲ್ ರೆಹಿಮಾನ್ ವಹಿಸಿದ್ದರು. ಸದಸ್ಯರಾದ ಎನ್.ಪಿ.ಶೆಟ್ಟಿ,ರಾಜಾ ಪತ್ರಾವೋ,ಜೇಸಿ ಸಾಲ್ಯಾನ್ ಸಂಪನ್ಮೂಲ ವ್ಯಕ್ತಿ ಉಡುಪಿ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ್ ಉಪಸ್ಥಿತರಿದ್ದರು.

Kinnigoli-04041407 Bhagyavan Sanil

Comments

comments

Comments are closed.

Read previous post:
Kinnigoli-04041405
ಮುಲ್ಕಿ ಒಕ್ಕೂಟ ಪದಗ್ರಹಣ ಸಮಾರಂಭ

ಮೂಲ್ಕಿ: ಗ್ರಾಮೀಣ ಬಡ ವರ್ಗದ ಮಹಿಳೆಯರನ್ನು ಸಂಘಟಿಸಿ ಸ್ವಾವಲಂಭಿಗಳನ್ನಾಗಿ ಆರ್ಥಿಕ ಸಡೃಡತೆ ಕಂಡುಕೊಳ್ಳುವಂತೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಅಭಿನಂದನೀಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು...

Close