ಶ್ರೀ ನಾರಾಯಣಗುರು ಇಂಗ್ಲಿಷ್ ಪುಸ್ತಕ ಬಿಡುಗಡೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಭಾರತೀಯ ಸಾಂಪ್ರದಾಯಿಕ ತಿಳುವಳಿಕೆಯನ್ನು ಪ್ರಶ್ನಿಸಿ ಶೂದ್ರ ವರ್ಗಕ್ಕೆ ವಿದ್ಯೆ ಮತ್ತು ಸಂಘಟನೆಗಾಗಿ ಹೋರಾಡಿದರು, ಅವರ ತತ್ವಗಳು ಮತ್ತು ಅವರುತೋರಿದ ಬೆಳಕಿನ ಹಿನ್ನೆಲೆಯಲ್ಲಿ ನಾವು ನಮ್ಮ ಹೋರಾಟಗಳನ್ನು ಪುನಃ ಸಂಘಟಿಸಬೇಕಾಗಿದೆ ಎಂದು ಶ್ರೀ ನಾರಾಯಣಗುರು ವಿಜಯದರ್ಶನ ಕನ್ನಡ ಕೃತಿ ಕರ್ತ ಸಂಶೋದಕ ಬಾಬು ಶಿವ ಪೂಜಾರಿ ಹೇಳಿದರು.
ದೆಹಲಿಯ ಬಿಲ್ಲವರ ಅಸೋಸಿಯೇಷನ್ ಪ್ರಕಾಶಿಸಿದ ಶ್ರೀ ನಾರಾಯಣಗುರು ವಿಜಯದರ್ಶನ ಇಂಗ್ಲಿಷ್ ಅವತರಣಿಕೆ ಪುಸ್ತಕವನ್ನು ಭಾನುವಾರ ದೆಹಲಿ ಕರ್ನಾಟಕ ಸಂಘದಲ್ಲಿ ಬಿಡುಗಡೆಗೊಳಿಸುವ ಸಮಾರಂಭದ ದಿಕ್ಸೂಚಿ ಭಾಷಣ ಮಾಡಿದರು.
ದೆಹಲಿ ತುಳು ಸಿರಿ ಮತ್ತುದೆಹಲಿ ಕರ್ನಾಟಕ ಸಂಘವು ಜೊತೆಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ದೆಹಲಿ ಬಿಲ್ಲವರ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಹೋಟೇಲ್ ಉದ್ಯಮಿ ಜಯರಾಮ ಬನಾನ್ ಪುಸ್ತಕವನ್ನು ಬಿಡುಗಡೆ ಗೊಳಿಸಿದರು.
ಮೂಲ ಕನ್ನಡ ಪುಸ್ತಕವನ್ನುಆಂಗ್ಲ ಭಾಷೆಗೆ ಅನುವಾದಿಸಿದ ಲೇಖಕಿ ಮೂಲ್ಕಿ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ.ಶಶಿಲೇಖ ಮಾತಾಡಿ, ’ಈ ಕೃತಿ ರಚನೆಯು ಶ್ರೀ ನಾರಾಯಣ ಗುರುಗಳ ತತ್ವ ಮತ್ತು ಆದರ್ಶ ನನ್ನ ತಿಳುವಳಿಕೆಯ ಮೇಲೆ ಅಪಾರವಾದ ಪ್ರಭಾವ ಬೀರಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಬಿ ಎಂ ರೋಹಿಣಿ ಮಾತಾಡಿ ಹೆಣ್ಣು ಮಕ್ಕಳು ಪಡುತ್ತಿರುವ ಕಷ್ಟಗಳನ್ನು ಕಂಡು ಶ್ರೀ ಗುರುಗಳು ಸಮಾಜದಲ್ಲಿ ಸಂಘಟನೆ ಮತ್ತು ವಿದ್ಯೆಯಿಂದ ಸಮಾನತೆ ಗಳಿಸಬಹುದು ಎಂದು ನುಡಿದಿದ್ದರು ಅವರ ತತ್ವ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ ಎಂದರು. ಇದೇ ಸಂದರ್ಭದಲ್ಲಿ ಲೇಖಕರಾದ ಬಾಬು ಶಿವ ಪೂಜಾರಿ, ಶಶಿಲೇಖಾ ಮತ್ತು ಬಿ ಎಂ ರೋಹಿಣಿಅವರನ್ನು ದೆಹಲಿ ಬಿಲ್ಲವರ ಅಸೋಸಿಯೇಷನ್ ವತಿಯಿಂದ ಜಯರಾಮ ಬನಾನ್ ಮತ್ತು ಪ್ರಭಾಕರ ಬಂಗೇರ ಶಾಲು ಹೊದಿಸಿ, ಸ್ಮರಣಿಕೆ ನೀಡಿಸನ್ಮಾನಿಸಿದರು. ಸುರೇಂದ್ರ ಬಂಗೇರ ಉಪಸ್ಥಿತರಿದ್ದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ದೆಹಲಿ ಕರ್ನಾಟಕಸಂಘದಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತಾಡಿ,-’ ದೆಹಲಿ ಕರ್ನಾಟಕ ಸಂಘವು ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ. ಸದ್ಯದಲ್ಲಿಯೇ ಸಂಘವು ಸಿದ್ದವ್ವನ ಹಳ್ಳಿ ಕೃಷ್ಣಶರ್ಮರ ವಾರ್ಧಾಯಾತ್ರೆಯನ್ನುಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲಿದೆ, ಕರ್ನಾಟಕದಎಲ್ಲ ಭಾಷೆಗಳಿಗೆ ಸಂಘವು ಒಂದುಒಳ್ಳೆಯ ವೇದಿಕೆಯಾಗಬೇಕುಎಂಬುದು ನನ್ನ ಆಸೆ. ಆ ಪ್ರಕಾರ ಪುಸ್ತಕ ಬಿಡುಗಡೆ ಮತ್ತುಇತರತುಳು ಕಾರ್ಯಕ್ರಮ ನಡೆಯುತ್ತಿದೆ, ಮುಂದೆಕೊಡವ ಮತ್ತುಕೊಂಕಣಿ ಭಾಷೆಯ ಕಾರ್ಯಕ್ರಮಗಳೂ ನಡೆಯಲಿವೆ’ ಎಂದು ಹೇಳಿದರು.
ಕಾರ್ಯಕ್ರಮದಆರಂಭದಲ್ಲಿದೆಹಲಿ ತುಳು ಸಿರಿಯ ಸದಸ್ಯರುಪೂಜಾ ಪ್ರದೀಪ್‌ಅವರ ನೇತ್ರತ್ವದಲ್ಲಿತುಳು ಭಾವಗೀತೆಯೊಂದನ್ನು ಪ್ರಸ್ತುತ ಪಡಿಸಿದರು.ಡಾ. ಅವನೀಂದ್ರನಾಥರಾವ್‌ಅವರು ಸ್ವಾಗತಿಸಿದರು.ಕಾರ್ಯದರ್ಶಿ ಸಿ ಎಂ ನಾಗರಾಜಅವರು ವಂದಿಸಿದರು.ಬಿಲ್ಲವರ ಅಸೋಸಿಯೇಷನ್‌ನ ಸದಸ್ಯ ಪ್ರದೀಪ್ ಪೂಜಾರಿ, ಬಾಲಕೃಷ್ಣ ಸನೀಲ್, ಜಯಾನಂದ ಬಂಗೇರ, ಬಾಬುರಾಜ ಪೂಜಾರಿ, ಶರ್ಮಿಳಾ, ನೈನ ಪೂಜಾರಿ ಮತ್ತಿತರರು ಹಾಜರಿದ್ದರು. ಸಾಹಿತಿಡಾ.ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಡೆದ ಸುಗಮ ಸಂಗೀತಕಾರ್ಯಕ್ರಮದಲ್ಲಿ ಗಾಯಕ ಶಶಿಧರ ಕೋಟೆಅವರು ಅಮೃತ ಸೋಮೇಶ್ವರ ಮತ್ತು ಪಾಲ್ತಾಡಿರಾಮಕೃಷ್ಣಆಚಾರ್‌ಅವರ ತುಳು ರಚನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

Kinnigoli-04041408Bhagyavan Sanil

Comments

comments

Comments are closed.

Read previous post:
ಉಚಿತ ವ್ಯಕ್ತಿತ್ವ ವಿಕಸನ ಶಿಬಿರ

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಜಾಗೃತಿಗೊಳಿಸಿ ಸ್ವಾವಲಂಭಿಗಳಾಗಿ ನಾಯಕತ್ವ ಗುಣಗಳನ್ನು ಹೆಚ್ಚಿಸಲು ಬೇಸಿಗೆ ಶಿಭಿರಗಳು ಬಹು ಸಹಕಾರಿಯಾಗುತ್ತದೆ ಎಂದು ಮೂಲ್ಕಿ ನಾರಾಯಣಗುರು ಸಂಯುಕ್ತ ಪದವಿ ಪೂರ್ವ...

Close