ಮೇ. 25 ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹ್ಮಮ್ಮಾಯಿ ದೇವಳದಲ್ಲಿ ಮೇ. 25 ಭಾನುವಾರದಂದು ದೇವಳದ ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಸಾಮೂಹಿಕ ವಿವಾಹವನ್ನು ಅಪರಾಹ್ನ ಅಭಿಜಿನ್ ಸುಮುಹೂರ್ತದಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ನೆರವೇರಿಸಲಾಗುವುದು. ದೇವಳದ ವತಿಯಿಂದ ವಧುವಿಗೆ ಸೀರೆ-ರವಿಕೆ-ಕಣ ಕರಿಮಣಿ- ತಾಳಿ ಮತ್ತು ವರನಿಗೆ ಧೋತಿ, ಶಾಲು, ಪೇಟಗಳನ್ನು ನೀಡಲಾಗುವುದು. ವಿಚ್ಛೇದಿತರಿಗೂ ಅವಕಾಶವಿದ್ದು ಎಪ್ರಿಲ್ ೧೫ರ ಮೊದಲು ಅಸಕ್ತರು ಸಮಗ್ರ ಮಾಹಿತಿಯನ್ನು ಒದಗಿಸಬೇಕಾಗಿ ಕೋರಲಾಗಿದೆ.
ಮುಂಬೈ ಉದ್ಯಮಿ ವಿರಾರ್ ಶಂಕರ ಶೆಟ್ಟಿ , ಮೂಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರುರವರ ಮುಂದಾಳುತನದಲ್ಲಿ ನಡೆಯಲಿದೆ ಎಂದು ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಿ. ದೂರವಾಣಿ ಸಂಖ್ಯೆ : 9945933837, 7760381550, 9743476505

Comments

comments

Comments are closed.

Read previous post:
ಗುರುಪುರ ಬಿಜೆಪಿ ಬೆಂಬಲಿತ ಜನಪ್ರತಿನಿದಿಗಳ ಸಭೆ

ಕೈಕಂಬ: ಕಾಂಗ್ರೆಸ್ ಅದಿಕಾರಕ್ಕೆ ಬಂದು ವರ್ಷ ಕಳೆದರು ಅಭಿವೃದ್ಧಿಯ ಕಡೆಗೆ ಗಮನ ಕೊಡದೆ ಇತರ ಪಕ್ಷದವರನ್ನು ಟೀಕಿಸುವುದರಲ್ಲೆ ಕಾಲಹರಣ ಮಾಡುತ್ತದೆ ಎಂದು ಮಾಜಿ ಶಾಸಕ ಕೃಷ್ಣ ಜೆ ಪಾಲೆಮಾರ್...

Close