ಶಿಸ್ತು ಸಂಸ್ಕಾರ, ಸಂಸ್ಕ್ರತಿ ಬೆಳೆಸಿ : ಪುನರೂರು

ಕಿನ್ನಿಗೋಳಿ: ಶಿಸ್ತು ಸಂಸ್ಕಾರ, ಸಂಸ್ಕ್ರತಿಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾರ್ಥಿ ಶಿಕ್ಷಕರಿಗೆ ಕರೆಯಿತ್ತರು.
ಗುರುವಾರ ಪುನರೂರು ದೇವಳ ಸಭಾಂಗಣದಲ್ಲಿ ನಡೆದ ಕಾವೂರು ಮಂಗಳೂರು ಲೀಲಾವತಿ ಶೆಟ್ಟಿ ಶಿಕ್ಷಣ ಮಹಾವಿದ್ಯಾಲಯದ ಎರಡು ದಿನಗಳ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪುನರೂರು ದೇವಳ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್, ಯುಗಪುರುಷದ ಭುವನಾಭಿರಾಮ ಉಡುಪ, ಎಮ್.ವಿ. ಶೆಟ್ಟಿ ಮೆಮೋರಿಯಲ್ ಟ್ರಸ್ಟೀ ಹೀನಾ ಉರ್ಮಿಳಾ ಶೆಟ್ಟಿ, ಆಡಳಿತಾಧಿಕಾರಿ ಗೋವಿಂದ ನಾಯಕ್, ಸ್ಕೂಲ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್ ಕಾತ್ಯಾಯನಿ, ಲೀಲಾವತಿ ಶೆಟ್ಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಲೀಲಾವತಿ ಶೆಟ್ಟಿ ಉಪಸ್ಥಿತರಿದ್ದರು.
ವಾಣಿ ಸ್ವಾಗತಿಸಿ ವಿನೀತಾ ವಂದಿಸಿದರು. ಅನಂತರಾಮ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-05041403

Comments

comments

Comments are closed.

Read previous post:
Kinnigoli-05041402
ಬಾವಿಗೆ ಬಿದ್ದು ಮೃತಪಟ್ಟ ಅಪರೂಪದ ಪುನುಗು ಬೆಕ್ಕು

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ. ಅಳಿಯುತ್ತಿರುವ ಸಂತತಿಯಾದ ಈ ವಿಶಿಷ್ಟ...

Close