ಪುನರೂರು ರಾಶಿ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ ತಿಂಗಳ ೧೬ ರಂದು ನಡೆಯಲಿರುವ ರಾಶಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಪುನರೂರು ದೇವಳದಲ್ಲಿ ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಬಿಡುಗಡೆಗೊಳಿಸಿದರು. ದೇವಳದ ಧರ್ಮದರ್ಶಿ ಪಠೇಲ್ ವೆಂಕಟೇಶ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ರಾಶಿಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ರಾವ್ ನೀರಳಿಕೆ, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ವಿಶ್ವನಾಥ ರಾವ್ ಪುನರೂರು, ರವಿ ಶೆಟ್ಟಿ ಪುನರೂರು ಗುತ್ತು, ರಮೇಶ ಶೆಟ್ಟಿ ಪುನರೂರು ಗುತ್ತು,ಪೂವಪ್ಪ ಕಾರ್ನಾಡು, ಧನಂಜಯ ಶೆಟ್ಟಿಗಾರ್, ಪುರಂದರ ಶೆಟ್ಟಿಗಾರ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-05041404

Comments

comments

Comments are closed.

Read previous post:
ಶಿಸ್ತು ಸಂಸ್ಕಾರ, ಸಂಸ್ಕ್ರತಿ ಬೆಳೆಸಿ : ಪುನರೂರು

ಕಿನ್ನಿಗೋಳಿ: ಶಿಸ್ತು ಸಂಸ್ಕಾರ, ಸಂಸ್ಕ್ರತಿಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾರ್ಥಿ...

Close