ಸ್ಕೌಟ್ಸ್ ಗೈಡ್ಸ್ ವಾರ್ಷಿಕ ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಆಂತರಿಕ ಸದೃಢತೆ, ಶಿಸ್ತು ಮತ್ತು ಪರಿಸರ ಪ್ರಜ್ಞೆ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಪೂರಕ. ಶಿಸ್ತು ಸಂಘಟನೆಯ ಮೂಲಕ ದೇಶದ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಭಾಗಿಯಾಗಬೇಕು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಹೇಳಿದರು.
ಬುಧವಾರ ಕಿನ್ನಿಗೋಳಿ ವಸಂತ ಮಂಟಪದ ಬಳಿ ಮೇರಿವೆಲ್ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾನ್ಸನ್ ಜೊರೋಮ್ ಡಿಸೋಜ, ಮೇರಿವೆಲ್ ಆಂಗ್ಲಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಸಗಾಯ ಸೆಲ್ವಿ, ಭಗಿನಿ ಜೆಸಿಂತಾ ಡಿಸೋಜ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳಾದ ಹರೀಶ್ಚಂದ್ರ, ಪ್ರಭಾಕರ ಉಪಸ್ಥಿತರಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ವಿನೋದ ಕಾರ್ಯಕ್ರಮ ನಿರೂಪಿಸಿದರು.ಸ್ವೀಟಾ ಡಿಸೋಜ ವಂದಿಸಿದರು .
ಸಭಾ ಕಾರ್ಯಕ್ರಮ ಬಳಿಕ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಿಸರ ಸ್ವಚ್ಚಗೊಳಿಸಿದರು.

Kinnigoli-05041401

Comments

comments

Comments are closed.

Read previous post:
ಅನುದಾನಗಳ ಹೇಳಿಕೆಗಳೇ ಬಿಜೆಪಿ ಸರಕಾರದ ಸಾಧನೆ

ಕಿನ್ನಿಗೋಳಿ: ಹಿಂದಿನ ಬಿಜೆಪಿ ಸರಕಾರ ನಾಡಿನ ಜ್ವಲಂತ ಸಮಸ್ಯೆಗಳಿಗೆ ಸರಿಯಾದ ಅನುದಾನ ನೀಡಲಿಲ್ಲ. ಕೇವಲ ಬಾಯಿ ಮಾತಿನಲ್ಲಿ ಮಾತ್ರ ಕೋಟಿ, ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಎಂಬ ಹೇಳಿಕೆಗಳೇ...

Close