ಸೌರ ಶಕ್ತಿಯ ಬಳಕೆ ಒಂದು ದಿನದ ಕಾರ್ಯಾಗಾರ

ಕಿನ್ನಿಗೋಳಿ: ವಿದ್ಯುತ್ ಶಕ್ತಿಯ ಅಭಾವದ ಈ ದಿನಗಳಲ್ಲಿ ಸೌರಶಕ್ತಿಯ ಉಪಯೋಗಗಳನ್ನು ಅರಿತು ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಬೇಕು ಎಂದು ತೋಕೂರು ತಪೋವನ ರಾಮಕೃಷ್ಣ ಪೂಂಜಾ ಐ.ಟಿ.ಐ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲಿಯನ್ ಹೇಳಿದರು.
ತೋಕೂರು ತಪೋವನ ರಾಮಕೃಷ್ಣ ಪೂಂಜಾ ಐ.ಟಿ.ಐ ನಲ್ಲಿ, ಎನ್.ಎಸ್. ಎಸ್, ಘಟಕ, ಎನ್.ಇ.ಟಿ ರೋವರ್ಸ್ ಮತ್ತು ಎನ್.ಆರ್.ಎ.ಎಮ್ ಪಾಲಿಟೆಕ್ನಿಕ್ ನಿಟ್ಟೆ ಇದರ ಸಮುದಾಯ ಪಾಲಿಟೆಕ್ನಿಕ್ ವತಿಯಿಂದ ಸೌರ ಶಕ್ತಿಯ ಬಳಕೆ ಕಾರ್ಯಾಗಾರದಲ್ಲಿ ಮಾತನಾಡಿದರು.
ನಿಟ್ಟೆ ರುಕ್ಮಿಣಿ ಅಡ್ಯಂತಾಯ ಪಾಲಿಟೆಕ್ನಿಕ್‌ನ ಸಮುದಾಯ ಅಭಿವೃದ್ಧಿ ಯೋಜನೆ ಸಂಯೋಜನಾಧಿಕಾರಿ ವೆಂಕಟರಮಣ ಪ್ರಸಾದ್, ರಘುರಾಮ್ ರಾವ್, ಸುನಿಲ್ ಪೈ ಮುಲ್ಕಿ, ದೀಪಕ್ ಕಾಮತ್, ಅಮರೇಶಯ್ಯ ಮತ್ತು ತಿಪ್ಪೇಸ್ವಾಮಿ ಸೌರಶಕ್ತಿಯ ಬಳಕೆ ಮತ್ತು ಜಲ ಸಂಪನ್ಮೂಲ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

Kinnigoli-05041405

Comments

comments

Comments are closed.