ಅತ್ತೂರು- ಕೆಮ್ರಾಲ್ ಒಕ್ಕೂಟಗಳ ಪದಗ್ರಹಣ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಸಾಮಾನ್ಯರ ಉಳಿತಾಯ, ಸ್ವಾವಲಂಬನೆ ಹಾಗೂ ಅಭಿವೃದ್ಧಿಯಲ್ಲಿ ಸಹಕರಿಸಿ ಸಮಾಜದ ಸಭ್ಯ ನಾಗರೀಕರನ್ನಾಗಿ ರೂಪಿಸುತ್ತದೆ. ಎಂದು ಪಕ್ಷಿಕೆರೆ ಸಂತ ಜೂದರ ಚರ್ಚ್ ಧರ್ಮಗುರು ಫಾ| ಆಂಡ್ರ್ಯೂ ಲಿಯೋ ಡಿಸೋಜ ಹೇಳಿದರು.
ಭಾನುವಾರ ಪಕ್ಷಿಕೆರೆ ಸಂತ ಜೂದರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಕಿನ್ನಿಗೋಳಿ ಕಾರ್ಯಕ್ಷೇತ್ರದ ಅತ್ತೂರು- ಕೆಮ್ರಾಲ್ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ವಿವಿಧ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಜಾಗೃತಿ ವೇದಿಕೆಯ ಧನಂಜಯ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧ. ಗ್ರಾ. ಯೋ. ಯೋಜನಾಧಿಕಾರಿ ರಾಘವ ಎಂ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ , ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್, ಉಪಸ್ಥಿತರಿದ್ದರು.
ಕೆಮ್ರಾಲ್ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮೀ ಸ್ವಾಗತಿಸಿದರು. ಸೇವಾಪ್ರತಿನಿಧಿ ಬಬಿತಾ ಸುವರ್ಣ ವರದಿ ವಾಚಿಸಿದರು. ವಿನಯ ವಂದಿಸಿದರು. ಕಿನ್ನಿಗೋಳಿ ವಲಯದ ಮೇಲ್ವಿಚಾರಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08041405

Comments

comments

Comments are closed.

Read previous post:
ಕೆರೆಕಾಡು ವಿಜಯ ಸಂಕಲ್ಪ ದಿನಾಚರಣೆ

ಕಿನ್ನಿಗೋಳಿ : ನಮ್ಮ ದೇಶದ ಭವಿಷ್ಯವನ್ನು ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಅಭಿವೃದ್ಧಿ ಪರದತ್ತ ಕೊಂಡೊಯ್ಯಲು ನರೇಂದ್ರ ಮೋದಿಯ ಸಾರಥ್ಯ ಅತ್ಯಗತ್ಯ, ದೇಶದ ಹಿತದ ಸಿದ್ದಾಂತದೊಂದಿಗೆ ಮುನ್ನಡೆಯುವ...

Close