ಕೆಮ್ರಾಲ್ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ

ಕಿನ್ನಿಗೋಳಿ : ಕೆಮ್ರಾಲ್ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ ಶನಿವಾರ ಪದ್ಮನೂರು ಅಬ್ದುಲ್ ಕಾದರ್ ಮನೆ ವಠಾರದಲ್ಲಿ ನಡೆಯಿತು. ದ. ಕ. ಲೋಕಸಭಾ ಅಭ್ಯರ್ಥಿ ಜನಾರ್ದನ ಪೂಜಾರಿ ಬೆಂಬಲಿಸುವಂತೆ ಸಚಿವ ಅಭಯಚಂದ್ರ ಜೈನ್ ಅವರು ಕಾರ್ಯಕರ್ತರಲ್ಲಿ ವಿನಂತಿಸಿದರು. ಈ ಸಂದರ್ಭ ಸ್ಥಳೀಯ ಜೆಡಿಎಸ್ ಮುಖಂಡ ಕೆ. ಅಬ್ದುಲ್ಲಾ ಸಹಿತ 4 ಮಂದಿಯನ್ನು ಕಾಂಗ್ರೇಸ್ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಹಿರಿಯ ಕಾಂಗ್ರೇಸ್ ಮುಖಂಡ ಗುಣಪಾಲ ಶೆಟ್ಟಿ , ಮಾಜಿ ಜಿ. ಪಂ. ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಮುಲ್ಕಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಗೋಪಿನಾಥ ಪಡಂಗ, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಉಪಾಧ್ಯಕ್ಷ ರಿಚರ್ಡ್ ಡಿಸೋಜ, ಮಯ್ಯದ್ದಿ, ಗುರುರಾಜ ಎಸ್. ಪೂಜಾರಿ, ಜೋಸ್ಸಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041403

Comments

comments

Comments are closed.

Read previous post:
ತೋಕೂರು ಉಚಿತ ದಂತ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ, ದೇರಳಕಟ್ಟೆ, ರಾಷ್ಟ್ರೀಯ ಸೇವಾ ಘಟಕ, ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಉಚಿತ...

Close