ಕೆರೆಕಾಡು ವಿಜಯ ಸಂಕಲ್ಪ ದಿನಾಚರಣೆ

ಕಿನ್ನಿಗೋಳಿ : ನಮ್ಮ ದೇಶದ ಭವಿಷ್ಯವನ್ನು ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಅಭಿವೃದ್ಧಿ ಪರದತ್ತ ಕೊಂಡೊಯ್ಯಲು ನರೇಂದ್ರ ಮೋದಿಯ ಸಾರಥ್ಯ ಅತ್ಯಗತ್ಯ, ದೇಶದ ಹಿತದ ಸಿದ್ದಾಂತದೊಂದಿಗೆ ಮುನ್ನಡೆಯುವ ಪಕ್ಷ ಬಿಜೆಪಿ ಆಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಸತೀಶ್ ಭಟ್ ಕೊಳುವೈಲು ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪ್ರಸಾದ ನಿವಾಸದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನದ ವಿಜಯ ಸಂಕಲ್ಪ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಮುಖಂಡರಾದ ಕೆ. ಭುವನಾಭಿರಾಮ ಉಡುಪ, ಬಿಜೆಪಿ ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಿಲ್ಪಾಡಿ ಗ್ರಾ.ಪಂ.ಸದಸ್ಯರಾದ ಕೃಷ್ಣ ಶೆಟ್ಟಿಗಾರ್, ರಾಜೇಶ್ ಭಟ್, ಗೀತಾ ಆಚಾರ್ಯ, ಇಂದಿರಾ, ಮಾಜಿ ಅಧ್ಯಕ್ಷೆ ಜಾನಕಿ ಶೆಟ್ಟಿಗಾರ್, ರಂಗನಾಥ ಶೆಟ್ಟಿ, ಶರತ್ ಕುಬೆವೂರು, ಪ್ರಾಣೇಶ್ ಭಟ್ ದೇಂದಡ್ಕ, ಶ್ರೀನಿವಾಸ ಆಚಾರ್ಯ, ಶ್ರೀಕಾಂತ ರಾವ್, ಜೀವನ್ ಶೆಟ್ಟಿ, ಮಾಧವ ಶೆಟ್ಟಿಗಾರ್, ಶ್ಯಾಂ ಪಡುಪಣಂಬೂರು, ಯೋಗೀಶ್, ಪ್ರಕಾಶ್ ರಾವ್, ವಸಂತ ಶೆಟ್ಟಿಗಾರ್, ಯೋಗಾನಂದ, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041404

Comments

comments

Comments are closed.

Read previous post:
ಕೆಮ್ರಾಲ್ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ

ಕಿನ್ನಿಗೋಳಿ : ಕೆಮ್ರಾಲ್ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ ಶನಿವಾರ ಪದ್ಮನೂರು ಅಬ್ದುಲ್ ಕಾದರ್ ಮನೆ ವಠಾರದಲ್ಲಿ ನಡೆಯಿತು. ದ. ಕ. ಲೋಕಸಭಾ ಅಭ್ಯರ್ಥಿ ಜನಾರ್ದನ ಪೂಜಾರಿ...

Close