ದೇಶದಲ್ಲಿ ಮೋದಿ ಸರಕಾರ ಖಚಿತ

ಕಿನ್ನಿಗೋಳಿ : ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐ. ಟಿ ಪಾರ್ಕ್ ನಿರ್ಮಾಣ ಹಾಗೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಕರಾವಳಿ ಬಂದರುಗಳ ಅಭಿವೃದ್ಧಿ, ಮಂಗಳೂರಿಗೆ ರೈಲು ವಿಭಾಗ ಹಾಗೂ ಉದ್ಯೋಗ ನೀಡುವ ಯೋಜನೆಗಳ ಹೊಸ ಮಾಸ್ಟರ್ ಪ್ಲಾನ್‌ಗಳ ಯೋಜನೆ ಇದೆ ಎಂದು ದ. ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೇಸಿಗರು ಸೋಲುವ ಭೀತಿಯಿಂದ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಪರಿಸರಮಾರಕ ಯೋಜನೆ ನಿಡ್ಡೋಡಿ ಮೆಗಾ ಆಲ್ಟ್ರಾ ಪವರ್ ಮೆಗಾ ಉಷ್ಣ ವಿದ್ಯುತ್ ಸ್ಥಾವರ, ಎತ್ತಿನ ಹೊಳೆ ಯೋಜನೆ , ನೇತ್ರಾವತಿ ತಿರುವು ಯೋಜನೆಗಳು ಕಾಂಗ್ರೇಸ್ ಸರಕಾರದ ಕೊಡುಗೆಗಳಾಗಿದ್ದು ಇದಕ್ಕೆ ನನ್ನ ಸ್ಪಷ್ಟ ವಿರೋಧವಿದೆ ಯೋಜನೆ ಬರುವುದಕ್ಕೆ ನಾನು ಬಿಡುವುದಿಲ್ಲ ಈ ಬಗ್ಗೆ ಜನರಿಗೆ ಸಂಶಯ ಬೇಡ ಎಂದು ಕಟೀಲ್ ಹೇಳಿದರು.
ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ವಿರೋಧ ಪಕ್ಷದವರ ಟೀಕೆಗಳಿಗೆ ಬಗ್ಗುವುದಿಲ್ಲಿ, ಜಗ್ಗುವುದಿಲ್ಲ, ಮನಗೊಡುವುದಿಲ್ಲ ಪರಿಸರ ಸಹ್ಯ ಯೋಜನೆಗಳಿಗೆ ನನ್ನ ಬೆಂಬಲವಿದೆ. ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಉಮಾನಾಥ ಕೋಟ್ಯಾನ್, ಜಗದೀಶ ಅಧಿಕಾರಿ, ಸುಚರಿತ ಶೆಟ್ಟಿ , ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಈಶ್ವರ್ ಕಟೀಲ್, ದೇವಪ್ರಸಾದ್ ಪುನರೂರು, ಆಶಾ ರತ್ನಾಕರ ಸುವರ್ಣ, ಚಂದ್ರಶೇಖರ ಶೆಟ್ಟಿ , ಶರತ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ಪ್ರತೀಕ್ ಶೆಟ್ಟಿ , ಜನಾರ್ದನ ಕಿಲೆಂಜೂರು, ಬೇಬಿ ಕೋಟ್ಯಾನ್, ಜೋಕಿಂ ಡಿಕೋಸ್ತಾ, ವನಿತಾ ಅಮೀನ್, ವಜ್ರಾಕ್ಷಿಶೆಟ್ಟಿ , ಸಾವಿತ್ರಿ, ಜಯಾನಂದ ಸುವರ್ಣ, ರಮೇಶ್ ಶೆಟ್ಟಿ , ಸತೀಶ್ ಅಂಚನ್ ಮುಲ್ಕಿ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041412

Comments

comments

Comments are closed.

Read previous post:
ಕೆರೆಕಾಡು ಬಿಜೆಪಿ ಪಾದಯಾತ್ರೆ

ಕಿನ್ನಿಗೋಳಿ : ಕ್ಯಾಪ್ಶನ್: ಕೆರೆಕಾಡು ಪರಿಸರದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಹಾಗೂ ಮನೆ ಮತಯಾಚನೆ ಸೋಮವಾರ ನಡೆಯಿತು. ಬಿಜೆಪಿ ಮುಖಂಡರಾದ...

Close