ತೋಕೂರು ಉಚಿತ ದಂತ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ, ದೇರಳಕಟ್ಟೆ, ರಾಷ್ಟ್ರೀಯ ಸೇವಾ ಘಟಕ, ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ಶುಕ್ರವಾರ ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಶಿಬಿರ ಉದ್ಘಾಟಿಸಿದರು. ಈ ಸಂದರ್ಭ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ ಅಸಿಸ್ಟೆಂಟ್ ಪ್ರೋಫೆಸರ್ ಡಾ| ಆಡ್ರ್ಯೂ ಡಿ.ಕ್ರೂಸ್, ಡಾ| ಗುರುದತ್ತ್ , ಸಾಹಿತಿ ಎನ್.ಪಿ. ಶೆಟ್ಟಿ, ಶ್ರೀ ವೆಂಕಟರಮಣ ಗಟ್ಟಿ ರಘುರಾಮ ರಾವ್, ಸುರೇಶ್ ಎಸ್., ವಿಶ್ವನಾಥ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041402

Comments

comments

Comments are closed.

Read previous post:
ಉಷಾ ರಾಮ್ ದಾಸ್ ವಿದಾಯ ಸನ್ಮಾನ

ಕಿನ್ನಿಗೋಳಿ : ಪ್ರತಿಭಾವಂತ ಶಿಕ್ಷಕರಿಂದ ಸಮಾಜಕ್ಕೆ ಸನ್ನಡತೆ, ಭವಿಷ್ಯಯುಳ್ಳ ಸತ್ಪ್ರಜೆಗಳನ್ನು ನೀಡಲು ಸಾದ್ಯ, ಉಷಾ ರಾಮ್ ದಾಸ್ ತಮ್ಮ ಸೇವಾ ಅವಧಿಯಲ್ಲಿ ಶಾಲೆಗಾಗಿ ಅಭಿವೃದ್ದಿ ಪರ ಕೆಲಸಗಳನ್ನು...

Close