ಕ್ರೀಡೆಯೊಂದಿಗೆ ಸಾಮಾಜಿಕ ಚಟುವಟಿಕೆ ನಡೆಯಲಿ

ಮುಲ್ಕಿ: ಆಸಕ್ತಿದಾಯಕ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಬೇಕು. ಕ್ರೀಡಾ ಸಂಘಟನೆಯೊಂದಿಗೆ ಸಾಮಾಜಿಕ ಚಟುವಟಿಕೆಯನ್ನು ಸಹ ಗ್ರಾಮದ ಅಭಿವೃದ್ಧಿಗಾಗಿ ನಡೆಸಿದಲ್ಲಿ ಜನರ ಪ್ರೋತ್ಸಾಹ ಸಿಗುವಂತಾಗುತ್ತದೆ ಎಂದು ಖ್ಯಾತ ನೋಟರಿ, ವಕೀಲ ಬಿಪಿನ್ ಪ್ರಸಾದ್ ಹೇಳಿದರು.
ಮುಲ್ಕಿ ಬಳಿಯ ಕಕ್ವ ಮಂದಾಡಿಯಲ್ಲಿ ನಡೆದ ಮಂದಾಡಿ ಫ್ರೆಂಡ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ಮಂದಾಡಿ ಫ್ರೆಂಡ್ಸ್ ಟ್ರೋಫಿ 2014ರ ಕ್ರಿಕೇಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಫ್ರೆಂಡ್ಸ್ ಕ್ಲಬ್‌ನ ಗೌರವಾಧ್ಯಕ್ಷ ರತ್ನಾಕರ ಕೋಟ್ಯಾನ್‌ರವರು ಕೋಟೆಬಬ್ಬು ದೈವಸ್ಥಾನದ ಹಿರಿಯ ದರ್ಶನ ಪಾತ್ರಿ ಕೃಷ್ಣ ಯಾನೆ ಕೊರಗ ಮುಖಾರಿಯನ್ನು ವಿಶೇಷವಾಗಿ ನಗದು ಪುರಸ್ಕಾರದೊಂದಿಗೆ ಗೌರವಿಸಿ ಶುಭಹಾರೈಸಿದರು.
ಮಟ್ಟು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸದಾನಂದ ಸುವರ್ಣ, ಮೂಲ್ಕಿಯ ವೈದ್ಯ ಡಾ.ಲೆನಿನ್ ರಾಜ್, ಸಾಮಾಜಿಕ ಸಂಘಟಕ ರಮಾನಾಥ ಪೈ ಮೂಲ್ಕಿ, ದೈವದ ಸೇವಾಕರ್ತ ಪದ್ಮನಾಭ ಗುಜರನ್, ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಲೀಲಾಧರ ಬಂಗೇರ, ಕಾರ್ಯದರ್ಶಿ ಶಿವಾನಂದ ಬಂಗೇರ, ಕ್ರಿಕೇಟ್ ತಂಡದ ನಾಯಕ ಪ್ರಸಾದ್ ಕೋಟ್ಯಾನ್ ಇನ್ನಿತರರು ಉಪಸ್ಥಿತರಿದ್ದರು. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು ಒಂದು ಎಕರೆಯ ಬಾಕಿಮಾರು ಗದ್ದೆಯನ್ನು ಶ್ರಮದಾನ ಮೂಲಕ ಕ್ರಿಕೇಟ್ ಪಂದ್ಯಾಟದ ಸುಂದರ ಮೈದಾನವಾಗಿ ನಿರ್ಮಿಸಿ ಕೊಂಡು ಪಂದ್ಯಾಟದ ಅಚ್ಚುಕಟ್ಟು ವ್ಯವಸ್ಥೆಯು ಕ್ರೀಡಾ ಪ್ರೇಮಿಗಳಿಂದ ಪ್ರಶಂಸೆಗೆ ಪಾತ್ರವಾಗಿತ್ತು, 60 ಗಜಗಳ ಹೊನಲು ಬೆಳಕಿನ ಈ ಕ್ರಿಕೇಟ್ ಪಂದ್ಯಾಟದಲ್ಲಿ ೪೦ಕ್ಕಿಂತಲೂ ಹೆಚ್ಚು ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು.

Kinnigoli-09041401

Narendra Kerekadu

Comments

comments

Comments are closed.

Read previous post:
ದೇಶದಲ್ಲಿ ಮೋದಿ ಸರಕಾರ ಖಚಿತ

ಕಿನ್ನಿಗೋಳಿ : ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐ. ಟಿ ಪಾರ್ಕ್ ನಿರ್ಮಾಣ ಹಾಗೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಕರಾವಳಿ ಬಂದರುಗಳ...

Close