ಬಲಿಷ್ಠ ಭಾರತಕ್ಕಾಗಿ ಮೋದಿ

ಮುಲ್ಕಿ : ನರೇಂದ್ರ ಮೋದಿಯಿಂದಾಗಿ ಭಾರತವನ್ನು ಬಲಿಷ್ಠವಾಗಿ ಕಟ್ಟಬೇಕಾದ ಅನಿವಾರ್ಯತೆ ಇದ್ದು, ಅವರನ್ನು ಬೆಂಬಲಿಸುವ ಮೂಲಕ ಮತದಾರರು ಸ್ವಯಂ ಪ್ರೇರಣೆಯಿಂದ ಜಾತಿ, ಮತ, ಭೇದವಿಲ್ಲದೇ ಬೆಂಬಲಿಸುತ್ತಿದ್ದು, ಹೋದೆಡೆಯಲ್ಲಿ ಭಾರೀ ಬೆಂಬಲ ಸಿಗುತ್ತಿದೆ. ವಿರೋಧಿಗಳ ಅಪಪ್ರಚಾರವನ್ನು ಲೆಕ್ಕಿಸದೇ ಜನರು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಅಭೂತಪೂರ್ವ ಜನಬೆಂಬಲ ವ್ಯಕ್ತಪಡಿಸಿದ್ದಾರೆ. ದಾಖಲೆಯ ಅಂತರದಲ್ಲಿ ಈ ಬಾರಿ ಕರಾವಳಿಯಲ್ಲಿ ಬಿಜೆಪಿ ಆಯ್ಕೆಯಾಗಲಿದ್ದು ಕಾರ್ಯಕರ್ತರ ಹಗಲು ರಾತ್ರಿ ಶ್ರಮದ ಫಲದಿಂದ ಇದು ಸಾಧ್ಯವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ಹೇಳಿದರು.

ಹಳೆಯಂಗಡಿ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಪ್ರಚಾರ ಕಾರ್ಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು.
ದೇವಳದ ಪ್ರಮುಖರಾದ ಸೂರ್ಯಕುಮಾರ್ ಹಾಗೂ ಪಂಜ ಶಾಂತರಾಮ ಶೆಟ್ಟಿ ವಿಶೇಷವಾಗಿ ನಳಿನ್‌ಕುಮಾರ್ ಕಟೀಲ್‌ರನ್ನು ದೇವಳದ ವತಿಯಿಂದ ಗೌರವಿಸಿದರು.
ನಂತರ ಹಳೆಯಂಗಡಿ ಹಿರಿಯ ಧಾರ್ಮಿಕ ನೇತಾರ ಕೃಷ್ಣ ಭಟ್‌ರವರ ಮನೆಗೆ ತೆರಳಿ ಮತಯಾಚನೆ ನಡೆಸಿದರು. ರಾಮಾನುಗ್ರಹದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿದರು. ಹಳೆಯಂಗಡಿ ಪೇಟೆಯಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ನಡೆಸಿದರು. ಬಳ್ಕುಂಜೆ, ಐಕಳದಲ್ಲಿ ಕಾರ್ಯಕರ್ತರ ಸಭೆಯನ್ನು ಕರ್ನಿರೆ ಹೊಸಮನೆಯಲ್ಲಿ ನಡೆಸಲಾಯಿತು, ಕರ್ನಿರೆ, ಕವತ್ತಾರು, ಬಳ್ಕುಂಜೆ, ಕೊಲ್ಲೂರು ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ನೀಡಿದರು. ದೇಂದಡ್ಕ ದೇವಳಕ್ಕೆ ಭೇಟಿ ನೀಡಿದರು.
ವಿಧಾನ ಪರಿಷತ್ತಿನ ಸದಸ್ಯ ಮೋನಪ್ಪ ಭಂಡಾರಿ, ಕ್ಷೇತ್ರದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಹಿರಿಯ ಬಿಜೆಪಿ ನಾಯಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಸತೀಶ್ ಭಟ್ ಕೊಳುವೈಲು, ಕಸ್ತೂರಿ ಪಂಜ, ಈಶ್ವರ ಕಟೀಲು, ಆದರ್ಶ ಶೆಟ್ಟಿ ಎಕ್ಕಾರು, ಭೋಜರಾಜ ಶೆಟ್ಟಿ, ಪ್ರಾಣೇಶ್ ಭಟ್ ದೇಂದಡ್ಕ, ರಂಗನಾಥ ಶೆಟ್ಟಿ, ಆಶಾ ರತ್ನಾಕರ ಸುವರ್ಣ, ಬೇಬಿ ಸುಂದರ ಕೋಟ್ಯಾನ್, ವಿನೋದ್ ಕುಮಾರ್ ಬೊಳ್ಳೂರು, ರಾಮಚಂದ್ರ ಶೆಣೈ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಶರತ್ ಕುಬೆವೂರು, ಸಾವಿತ್ರಿ ಸುವರ್ಣ, ಹಿಮಕರ, ಉಮಾನಾಥ ಕೋಟ್ಯಾನ್, ಸತೀಶ್ ಅಂಚನ್ ಮೂಲ್ಕಿ, ಸುನಿಲ್ ಆಳ್ವಾ, ಪುರುಷೋತ್ತಮ ರಾವ್, ಹರ್ಷರಾಜ್ ಶೆಟ್ಟಿ, ಉಮೇಶ್ ಮಾನಂಪಾಡಿ, ಮೀನಾಕ್ಷಿ ಬಂಗೇರ, ರಾಧಿಕಾ ಯಾದವ ಕೋಟ್ಯಾನ್, ವಸಂತಿ ಭಂಡಾರ್ತಿ, ಇನ್ನಿತರರು ಹಾಜರಿದ್ದರು.

Kinnigoli-09041402

Comments

comments

Comments are closed.

Read previous post:
ದೂರು ಕೊಟ್ಟವನೇ ಆರೋಪಿಯಾದ..!

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಪಾವಂಜೆ ಬಳಿ ಕಳೆದ ವಾರದಲ್ಲಿ ಮೀನು ಸಾಗಾಟದ ಲಾರಿ ಚಾಲಕನಾದ ಶಿವಮೊಗ್ಗ ಸೊರಬದ ಕಾನ್‌ಕೆರೆ ರಸ್ತೆಯ ಅಹಮ್ಮದ್ ಎಂಬುವರ ಪುತ್ರ ಮೊಹಮ್ಮದ್...

Close