ತತ್ವ ಸಿದ್ದಾಂತ ಕಾಂಗ್ರೇಸ್ ಪಕ್ಷದಲ್ಲಿದೆ

ಕಿನ್ನಿಗೋಳಿ : ಸೌಹಾದತೆ ಐಕ್ಯತೆಯ ಮಹಾತ್ಮಾ ಗಾಂಧಿಯ ತತ್ವ ಸಿದ್ದಾಂತ ಕಾಂಗ್ರೇಸ್ ಪಕ್ಷದಲ್ಲಿದೆ. ವಿದ್ಯಾವಂತ ಪ್ರತಿಭಾವಂತ ಬಡವರ ಬಂಧು ಕಾಂಗ್ರೇಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಅವರನ್ನು ಬೆಂಬಲಿಸಿ ಎಂದು ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಬುಧವಾರ ಪಕ್ಷಿಕೆರೆ ಪೇಟೆಯಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಯುಪಿಎ ಸರಕಾರ ಜನ ಪರ ಅಭಿವೃದ್ಧಿ ಕಾರ್ಯಗಳ ಸಾಧನೆ ಮಾಡಿ ಜಗತ್ತಿನಲ್ಲಿಯೇ 4 ನೇ ಸ್ಥಾನ ಪಡೆದುಕೊಂಡಿದೆ. ವಿರೋಧ ಪಕ್ಷಗಳು ಯುಪಿಎ ಸರಕಾರದ ಸಾಧನೆಯನ್ನು ಸಹಿಸದೆ sಸುಳ್ಳು ಆರೋಪಗಳನ್ನು ಮಾಡಿದೆ ಈ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ಸರಕಾರದಲ್ಲಿ ಭ್ರಷ್ಟಚಾರ ತುಂಬಿ ಹೋಗಿತ್ತು ಬಿಜೆಪಿ ಪಕ್ಷ ವ್ಯಕ್ತಿ ಪರ ರಾಜಕೀಯ ಮಾಡುತ್ತಿದೆ. ನರೇಂದ್ರ ಮೋದಿ ಸರ್ವಾಧಿಕಾರಿ ಹಾಗೂ ಬಂಡವಾಳ ಶಾಯಿಗಳ ಪರವಾಗಿದ್ದು, ಗುಜರಾತಿನ ಅಭಿವೃದ್ಧಿ ಪಾಠ ಹೇಳುತ್ತಿರುವ ಮೋದಿಯ ನಾಡಿನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತ್ತಿದ್ದಾರೆ. ರೈತರು ಕೃಷಿಗೆ ಪಂಪ್‌ಗಾಗಿ ವಿದ್ಯುತ್‌ಗೆ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಅಶಾಂತಿಯ ವಾತಾವರಣ ಬೇಕೇ ನೀವೇ ಯೋಚಿಸಿ ಎಂದು ಸೊರಕೆ ವ್ಯಂಗ್ಯವಾಡಿದರು.
ಉಭಯ ಜಿಲ್ಲೆಯಲ್ಲಿ ಮೋದಿ ಅಲೆ ಇಲ್ಲ ಇಲ್ಲಿರುವುದು ಕೇವಲ ಕಾಂಗ್ರೇಸ್ ಅಲೆ ಮಾತ್ರ. ಸುಳ್ಳಿನ ಕಂತೆಗಳನ್ನೇ ವಿರೋಧ ಪಕ್ಷಗಳು ಮಾಡುತ್ತಿವೆ. ರಾಜ್ಯ ಹಾಗೂ ಕೇಂದ್ರದ ಅಭಿವೃದ್ಧಿ ಕೆಲಸಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಿ ಮತ ಯಾಚಿಸಬೇಕಾಗಿದೆ ಎಂದು ಸಚಿವ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಕಾಂಗ್ರೇಸ್ ಮುಖಂಡರಾದ ಗುಣಪಾಲ ಶೆಟ್ಟಿ, ನೂರ್ ಮಹಮ್ಮದ್ ಉಪಸ್ಥಿತರಿದ್ದರು.

Kinnigoli-09041406

Comments

comments

Comments are closed.

Read previous post:
ಅಕ್ರಮ ದನ ಸಾಗಾಟ ಪತ್ತೆ

ಮುಲ್ಕಿ: ಕೆಂಪುಗುಡ್ಡೆ ಎಂಬಲ್ಲಿ ಉಡುಪಿ ಜಿಲ್ಲೆಯ ಫಲಿಮಾರಿನಿಂದ ಸುರತ್ಕಲ್ ಕಡೆಗೆ ಅಕ್ರಮವಾಗಿ 3 ದನ ಹಾಗೂ 4 ಸಣ್ಣ ಕರುಗಳನ್ನು ಮಿನಿ ಟೆಂಪೊ ಒಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ...

Close