ದ್ವಿಚಕ್ರ ವಾಹನ ಅಪಘಾತ

ಕಟೀಲು : ಬಜಪೆ ಠಾಣಾ ವ್ಯಾಪಿಯ ಎಕ್ಕಾರು ಎಂಬಲ್ಲಿ ಒವರ್ ಟೇಕ್ ಮಾಡುವ ಭರಾಟೆಯಲ್ಲಿ ಅಪಘಾತ ಸಂಭವಿಸಿದೆ.  ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತಿದ್ದ ಮರಳು ಸಾಗಿಸುವ ಟಿಪ್ಪರ್ ನ ಹಿಂದೆ ಬರುತಿದ್ದ ದ್ವಿಚಕ್ರ ವಾಹನ ಎಕ್ಕಾರು ಸಮೀಪದ ಕೆಂಚಗುಡ್ಡೆ ತಿರುವಿನಲ್ಲಿ ಒವರ್ ಟೇಕ್ ಮಾಡುವ ಸಂದರ್ಭ  ಮುಂದಿನಿಂದ ಬರುತಿದ್ದ ವಾಹನಕ್ಕೆ ದಿಕ್ಕಿ ಹೊಡೆಯುದನ್ನು ತಪ್ಪಿಸಲು ಹೋಗಿ ಎಡ ಬದಿಯಲ್ಲಿ ಸಂಚರಿಸುತ್ತಿದ್ದ  ಟಿಪ್ಪರ್ ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಮುಲ್ಕಿ ಪೊಲೀಸ್ ಸಿಬ್ಬಂಧಿ ಉಮೇಶ್ ದ್ವಿಚಕ್ರ ವಾಹನ ಚಲಾಯಿಸುತಿದ್ದು ಪತ್ನಿ ಸುರೇಖ (31) ಮತ್ತು ಮಗು ವಚನ್ (9) ಸಾವನ್ನಪ್ಪಿದ್ದು ಬಜಪೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Kinnigoli-11041407

Nishanth Kilenjoor

Comments

comments

Comments are closed.

Read previous post:
KInnigoli-11041403
ರಸ್ತೆಗೆ ಬಿದ್ದ ಗೋಳಿ ಮರದ ಕೊಂಬೆ

ಕಿನ್ನಿಗೋಳಿ : ಕಿನ್ನಿಗೋಳಿ ಮುಖ್ಯ ರಸ್ತೆಯ ರಾಜಾಂಗಣದ ಸಮೀಪ ಗುರುವಾರ ಬೃಹತ್ ಗೋಳಿ ಮರದ ದೊಡ್ಡ ಗಾತ್ರದ ಕೊಂಬೆಗಳು ತುಂಡಾಗಿ ರಸ್ತೆಗೆ ಬಿದ್ದ ಪರಿಣಾಮ ಪಕ್ಷಿಕೆರೆ ಮೂಲ್ಕಿ ಕಿನ್ನಿಗೋಳಿ...

Close