ಮಂದಿರಗಳು ಧರ್ಮ ಸಂಸ್ಕ್ರತಿಯ ಕೇಂದ್ರ

ಕಿನ್ನಿಗೋಳಿ : ಭಜನಾ ಮಂದಿರಗಳು ಧರ್ಮ ಸಂಸ್ಕಾರ ಸಂಸ್ಕ್ರತಿಯ ಕೇಂದ್ರವಾಗಬೇಕು. ಸಮಾಜದ ಅಭಿವೃದ್ಧಿಗೆ ಹಾಗೂ ಆರ್ಥಿಕ ದುರ್ಬಲರಿಗೆ ಸಹಾಯ ಹಸ್ತ ನೀಡುವಲ್ಲಿ ಶ್ರಮಿಸಬೇಕು ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಬುಧವಾರ ಕೆಂಚನಕೆರೆ ಸಮೀಪ ಅಂಗರಗುಡ್ಡೆ ರಾಮನಗರದಲ್ಲಿ ಶ್ರೀ ರಾಮ ಭಜನಾ ಮಂಡಳಿಯ 29ನೇ ವಾರ್ಷಿಕೋತ್ಸವದ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಪಠೇಲ್ ವಾಸುದೇವ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೃಷ್ಣ ಶೆಟ್ಟಿಗಾರ್, ಜೀವನ್ ಶೆಟ್ಟಿ, ಮೋಹನ್ ಕುಮಾರ್, ಕುಮಾರಿ ಅಕ್ಷಿತಾ ಅವರನ್ನು ಮಂದಿರದ ವತಿಯಿಂದ ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಮೀನಾಕ್ಷಿ ದೇವಾಡಿಗ ಅಂಗರಗುಡ್ಡೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಹಿಳಾ ಮಂಡಲದ ಅಧ್ಯಕ್ಷೆ ಕಮಲಾಕ್ಷಿ ದೇವಾಡಿಗ, ಶರತ್ ಶೆಟ್ಟಿ ಕಿನ್ನಿಗೋಳಿ, ವಿಕ್ಟರ್ ಸೆರಾವೊ, ರಾಜೇಶ್ ಕೆಂಚನಕೆರೆ, ಶ್ರೀಕಾಂತ್ ಶೆಟ್ಟಿ, ವಿಜಯಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

KInnigoli-11041401

Comments

comments

Comments are closed.

Read previous post:
ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ವಲಯದ ಭಾರತೀಯ ಕೆಥೋಲಿಕ್ ಯುವ ಸಂಚಾಲನದ ೨೦ನೇ ವರ್ಷದ ಅಂಗವಾಗಿ ಕಿನ್ನಿಗೋಳಿ ಚಚ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಬೆಳ್ಮಣ್, ಪೊಂಪೈ ಕಾಲೇಜು ಐಕಳ ಮತ್ತು...

Close