ಶ್ರೀ ವ್ಯಾಸ ಮಹರ್ಷಿ ವೇದ ಪಾಠ ಶಾಲೆ ವಾರ್ಷಿಕೋತ್ಸವ

ಮೂಲ್ಕಿ: ಬಹಳ ಸರಳವಾದ ಸಂಸ್ಕೃತ ಕಲಿಕೆಯಿಂದ ಭಾಷಾ ಶುದ್ದಿ ಹಾಗೂ ಹೆಚ್ಚಿನ ಉತ್ತಮ ವಿಚಾರಧಾರೆಗಳು ಸಂಸ್ಕೃತ ಗ್ರಂಥಗಳ ಓದುವಿಕೆಯಿಂದ ಲಭ್ಯವಾಗುತ್ತದೆ ಪಾಠ ಶಾಲೆಯ ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಅದ್ಯಾಪನ ನಡೆಸಿದಲ್ಲಿ ಸರಸ್ವತಿಯೊಂದಿಗೆ ಲಕ್ಷ್ಮಿಕೂಡ ನಾಲಗೆಯಲ್ಲಿ ಸ್ಥಿರವಾಗಿದ್ದು ಜೀವನದಲ್ಲಿ ಉನ್ನತಿ ಕಂಡುಕೊಳ್ಳಲು ಸಾದ್ಯ ಎಂದು ಮಂಗಳೂರು ಆಚಾರ್ಯ ಮಠದ ವಿದ್ವಾನ್ ನರಸಿಂಹಾಚಾರ್ಯರು ಹೇಳಿದರು.
ಮೂಲ್ಕಿ ಶ್ರೀ ವ್ಯಾಸ ಮಹರ್ಷಿ ವೇದ ಪಾಠ ಶಾಲೆಯ 8ನೇ ವಾರ್ಷಿಕೋತ್ಸವ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಡುಪಿ ಶ್ರೀ ವಾದಿರಾಜ ಸಂಶೋದನಾ ಸಂಸ್ಥೆಯ ಲಿಪಿ ತಜ್ಞ್ಷ ಮತ್ತು ಸುಗುಣ ಮಾಲಾ ಮಾಸಿಕ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಶಿಕ್ಷಣ ಸಂಸ್ಥೆಗಳು ಸಂಸೋಧನಾ ಕೇಂದ್ರವಾಗಿ ಬೆಳವಣಿಗೆ ಹೊಂದಿದರೆ ಮಾತ್ರ ವಿದ್ಯಾರ್ಥಿ ವರ್ಗಕ್ಕೆ ಸಹಕಾರಿಯಾಗುತ್ತದೆ. ಮೂಲ್ಕಿಯಲ್ಲಿ ಶ್ರೀ ಉಗ್ರ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿದ ಶ್ರೀ ವಿಜಯೀಂದ್ರ ತೀರ್ಥ ಸ್ವಾಮೀಜಿಯವರು ಕುಂಬ ಕೋಣಂನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದಂತೆ ಇಲ್ಲಿನ ಶಿಕ್ಷಣ ಕೇಂದ್ರವು ಮುಂಬರುವ ದಿನಗಳಲ್ಲಿ ವಿಶ್ವ ವಿದ್ಯಾಲಯವಾಗಿ ಬೆಳಗಲಿ ಎಂದರು.
ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಮಾತನಾಡಿ,ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಸಂಸ್ಕೃತ ಭಾಷೆಯ ತಿಳುವಳಿಕೆಗಾಗಿ ಕಾರ್ಯಕ್ರಮ ರೂಪಿಸಿ ಲೋಹ ರಾಸಾಯನ ಶಾಸ್ತ್ರದ ಬಗ್ಗೆ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಅದ್ಯಯನ ನಡೆಸುತ್ತಿದ್ದರೆ ನಾವು ಈ ಭಾಷೆಯ ಬಗ್ಗೆ ಕಿಂಚಿತ್ ಆಸಕ್ತಿ ತೋರಿಸದೆ ಪೂರ್ವಿಕರು ನಮಗಾಗಿ ಕಾಪಿಟ್ಟ ಸಂಪನ್ಮೂಲಗಳ ಬಗ್ಗೆ ನಿರಾಸಕ್ತಿಯಿಂದ ಇರುವುದು ವಿಪರ್ಯಾಸ ಎಂದರು.
ಮೂಲ್ಕಿ ವಿಜಯಾ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರೊ.ಬಿ.ಜಯರಾಂ ಮಾತನಾಡಿ, ಸಂಸ್ಕೃತ ಕಲಿಯುವ ಆಸಕ್ತಿಯಿವ ಎಲ್ಲರಿಗೂ ಉಚಿತವಾಗಿ ಕಲಿಸಲಾಗುವುದು ಸಂಸ್ಕೃತ ಕಲಿಯುವಿಕೆಗೆ ಯಾವುದೇ ವಯೋಮಿತಿ ಇಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ಎಂ.ವೇದವ್ಯಾಸ ಶೆಣೈ ವಹಿಸಿದ್ದರು. ಸಂದೇಶ ಶರ್ಮ ಸ್ವಾಗತಿಸಿದರು. ವಿದ್ಯಾ ಪೀಠದ ಕಾರ್ಯದರ್ಶಿ ಅತುಲ್ ಕುಡ್ವಾ ವಂದಿಸಿದರು.ಚಿತ್ರ:ಎಂಯುಎಲ್_ಎಪಿಎಲ್೧೦_೬ ಮಂಗಳೂರು ಆಚಾರ್ಯ ಮಠದ ವಿದ್ವಾನ್ ನರಸಿಂಹಾಚಾರ್ಯರು ಮಾತನಾಡುತ್ತಿದ್ದಾರೆ.

Kinnigoli-11041406

 Bhagyavan Sanil

 

Comments

comments

Comments are closed.

Read previous post:
ತತ್ವ ಸಿದ್ದಾಂತ ಕಾಂಗ್ರೇಸ್ ಪಕ್ಷದಲ್ಲಿದೆ

ಕಿನ್ನಿಗೋಳಿ : ಸೌಹಾದತೆ ಐಕ್ಯತೆಯ ಮಹಾತ್ಮಾ ಗಾಂಧಿಯ ತತ್ವ ಸಿದ್ದಾಂತ ಕಾಂಗ್ರೇಸ್ ಪಕ್ಷದಲ್ಲಿದೆ. ವಿದ್ಯಾವಂತ ಪ್ರತಿಭಾವಂತ ಬಡವರ ಬಂಧು ಕಾಂಗ್ರೇಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಅವರನ್ನು ಬೆಂಬಲಿಸಿ...

Close