ಯಕ್ಷಗಾನದ ಸರ್ವ ಸತ್ವಗಳು ಬೆಳಗಲಿ.

ಕಿನ್ನಿಗೋಳಿ: ಯಕ್ಷಗಾನದ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವ ಪರಿಪಾಠವಾಗಲಿ. ಯಕ್ಷಗಾನದ ಸರ್ವ ಸತ್ವಗಳು ಬೆಳಗಲಿ. ಎಂದು ಯಕ್ಷಗಾನದ ಛಂದೋ ಬ್ರಹ್ಮ ಡಾ| ಎನ್. ನಾರಾಯಣ ಶೆಟ್ಟಿ ಶಿಮಂತೂರು ಹೇಳಿದರು.
ಶುಕ್ರವಾರ ಕೆರೆಕಾಡುವಿನಲ್ಲಿ ನಡೆದ ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ತಂಡ ಮಕ್ಕಳ ಮೇಳದ ೬ನೇ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ಮೇಳದ ಮಕ್ಕಳಿಗೆ ಪುಸ್ತಕ ವಿತರಣೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮಕ್ಕಳ ಮೇಳದ ಗೌರವ ಸಲಹೆಗಾರರಾದ ಕೊಲೆಕಾಡಿ ವಾದಿರಾಜ ಉಪಾಧ್ಯಾಯ, ಮೋಹನ್ ಕೋಟ್ಯಾನ್, ಗುರುರಾಜ್ ಎಸ್. ಪೂಜಾರಿ, ಯುಗಪುರುಷದ ಪ್ರಧಾನ ಸಂಪಾದಕ ಕೆ ಭುವನಾಭಿರಾಮ ಉಡುಪ, ಯಕ್ಷಗಾನ ಪ್ರಸಂಗಕರ್ತ ಗಣೇಶ ಕೊಲೆಕಾಡಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಜಯಂತ ಅಮೀನ್ ಸ್ವಾಗತಿಸಿ, ಯತೀಶ್ ಧನ್ಯವಾದವಿತ್ತರು . ಉಮೇಶ್ ಜೆ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-12041401 Kinnigoli-12041402

Comments

comments

Comments are closed.

Read previous post:
Kinnigoli-11041409
ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿ

ಕಿನ್ನಿಗೋಳಿ : ಕಾಂಗ್ರೆಸ್‌ನವರು ತಾಕತ್ತಿದ್ದರೆ ಎತ್ತಿನ ಹೊಳೆ ಯೋಜನೆ ಬಿಜೆಪಿಯವರದ್ದು ದಕ್ಷಿಣ ಕನ್ನಡದಲ್ಲಿ ಹೇಳದೆ ಚಿಕ್ಕಬಳ್ಳಾಪುರದಲ್ಲಿ ಕೂಡಾ ಹೇಳಲಿ ದ್ವಂದ್ವ ಹೇಳಿಕೆ ನೀಡಿ ಜನರನ್ನು ಮರಳು ಮಾಡದಿರಿ ಎಂದು...

Close