ನಿಷ್ಕಳಂಕ ಶುದ್ದಹಸ್ತ ನಾಯಕರ ಅಗತ್ಯವಿದೆ

ಕಿನ್ನಿಗೋಳಿ : ದೇಶದ ಉಜ್ವಲ ಭವಿಷ್ಯಕ್ಕಾಗಿ ಜನಾರ್ದನ ಪೂಜಾರಿಯವರಂತಹ ನಿಷ್ಕಳಂಕ ಶುದ್ದಹಸ್ತ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕಿ ಚನಚಿತ್ರ ನಟಿ ಜಯಮಾಲ ಹೇಳಿದರು.
ಭಾನುವಾರ ಕಿನ್ನಿಗೋಳಿಯ ಲಲಿತ್ ಸಂಕೀರ್ಣದಲ್ಲಿ ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಪಕ್ಷ ಬಿಜೆಪಿ ತಮ್ಮ ಅಭ್ಯರ್ಥಿಗಳ ಬದಲು ಕೇವಲ ನರೇಂದ್ರ ಮೋದಿ ಹಾಗೂ ಗುಜರಾತ್‌ನ್ನು ಮಾದರಿಯಾಗಿ ಬಿಂಬಿಸುತ್ತಿದೆ. ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಜನರನ್ನು ವಂಚಿಸುತ್ತಿದ್ದಾರೆ. ಕೈಗಾರಿಕಾ ಅಭಿವೃದ್ಧಿ ಹೊಂದಿದ ಗುಜರಾತ್‌ನಲ್ಲಿ 60 ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆಗಳು ಮುಚ್ಚಿವೆ, ರೈತರಿಗೆ ವಿದ್ಯುತ್ ಕೃಷಿ ಪಂಪ್ ಸೆಟ್ ಅರ್ಜಿಗಳು ವಿಲೇವಾರಿಯಾಗಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿ ಮಕ್ಕಳು ವಿದ್ಯಾಬ್ಯಾಸ ವಂಚಿತರಾಗಿದ್ದಾರೆ ಬಡವರ ಜಮೀನು ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡಲಾಗಿದೆ. ಪ್ರಜ್ಞಾವಂತ ಮತದಾರರು ಚಿಂತನೆ ನಡೆಸುವುದು ಅಗತ್ಯ. ಗುಜರಾತ್ ರಾಜ್ಯದಲ್ಲಿ ಸರಿಯಾಗಿ ಅಭಿವೃದ್ಧಿ ನಡೆಸದ ಮೋದಿ ರಾಷ್ಟ್ರದಲ್ಲಿ ಹೇಗೆ ಅಭಿವೃದ್ಧಿ ಸಾಧಿಸಬಹುದು ಎಂಬುವುದು ಯಕ್ಷ ಪ್ರಶ್ನೆ. ಎಂದರು.
ಕಾಂಗ್ರೆಸ್ ತಾರಾ ಪ್ರಚಾರಕಿಯಾಗಿ ರಾಜ್ಯದಾದಂತ ಸಂಚರಿಸುತ್ತಿದ್ದು ಜನತೆ ಕಾಂಗ್ರೆಸ್ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಸ್ಥಾಪನೆ ಯಾಗಲಿದೆ ಎಂಬ ಭರವಸೆ ಮೂಡಿದೆ ಎಂದು ಹೇಳಿದರು
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಗುಣಪಾಲ ಶೆಟ್ಟಿ, ಶ್ಯಾಮಲಾ ಪಿ. ಹೆಗ್ಡೆ, ಶಾಲೆಟ್ ಪಿಂಟೊ, ಜೊಸ್ಸಿ ಪಿಂಟೊ.ಪ್ರಮೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕಿನ್ನಿಗೋಳಿ ಪೇಟೆ ಪರಿಸರದಲ್ಲಿ ಕಾಂಗ್ರೆಸ್ ಪರವಾಗಿ ಮತಯಾಚಿಸಿದರು.

Kinnigoli-13041404

Comments

comments

Comments are closed.

Read previous post:
Kinnigoli-13041403
ಗರಿಗಳ ಹಬ್ಬ

ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಭಾನುವಾರ ಶುಭ ಶುಕ್ರವಾರ (ಗುಡೆ ಪ್ರೈಡೆ) ನಿಮಿತ್ತ ಗರಿಗಳ ಹಬ್ಬ ನಡೆಯಿತು.

Close