ಕಿನ್ನಿಗೋಳಿ ಅಂಗಡಿಗೆ ನುಗ್ಗಿದ ಲಾರಿ

ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯ ರಸ್ತೆ ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಟಿಪ್ಪರ್ ಲಾರಿಯಂದು ಚಾಲಕನ ನಿಯಂತ್ರಣ ತಪ್ಪಿ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಬೊಲೆರೊ ಹಾಗೂ ನ್ಯಾನೋ ಕಾರಿಗೆ ಡಿಕ್ಕಿಯಾಗಿ ಪಕ್ಕದ ಅಂಗಡಿಗೆ ನುಗ್ಗಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕಿನ್ನಿಗೋಳಿಯಿಂದ ಉಲ್ಲಂಜೆ ಹೋಗುವ ರಸ್ತೆಯ ಪಕ್ಕದಲ್ಲಿ ಈ ಅಪಘಾತ ನಡೆದಿದ್ದು ಹಗಲು ಹೊತ್ತ್ತಿನಲ್ಲಿ ಜನರು ಬಸ್‌ಗಾಗಿ ನಿಲ್ಲುತ್ತಿದ್ದರು. ರಾತ್ರಿಯಾದ್ದರಿಂದ ಹೆಚ್ಚಿನ ಜನರು ಇರಲಿಲ್ಲ ಹತ್ತಿರವಿದ್ದ ನಾಲ್ಕು ಮಂದಿ ಮಹಿಳೆಯರು ಹಾಗೂ ಗಂಡಸರು ಓಡಿ ತಪ್ಪಿಸಿಕೊಂಡಿದ್ದಾರೆ. ಟಿಪ್ಪರ್ ಲಾರಿ ರಸ್ತೆಯ ಪಕ್ಕದಲ್ಲಿ ಇದ್ದ ಅಂಗಡಿಯ ಹೊರ ಭಾಗಕ್ಕೆ ನುಗಿದ್ದು ಅಂಗಡಿ ಮಾಡು ಬಿದ್ದಿದೆ. ನ್ಯಾನೋ ಕಾರು ಮಾಲಕರು ಸರ್ಕಲ್ ಬಳಿ ಕಾರು ನಿಲ್ಲಿಸಿ ಪಕ್ಕದ ಅಂಗಡಿಗೆ ಹೋಗಿರುವುದರಿಂದ ಅಪಾಯದಿಂದ ಪಾರಾಗಿದ್ದಾರೆ.

Kinnigoli-13041405

Comments

comments

Comments are closed.

Read previous post:
Kinnigoli-13041404
ನಿಷ್ಕಳಂಕ ಶುದ್ದಹಸ್ತ ನಾಯಕರ ಅಗತ್ಯವಿದೆ

ಕಿನ್ನಿಗೋಳಿ : ದೇಶದ ಉಜ್ವಲ ಭವಿಷ್ಯಕ್ಕಾಗಿ ಜನಾರ್ದನ ಪೂಜಾರಿಯವರಂತಹ ನಿಷ್ಕಳಂಕ ಶುದ್ದಹಸ್ತ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕಿ ಚನಚಿತ್ರ ನಟಿ ಜಯಮಾಲ ಹೇಳಿದರು. ಭಾನುವಾರ...

Close