ಮತದಾನ ವಿಭಿನ್ನ ಜಾಗೃತಿ..!

ಕಿನ್ನಿಗೋಳಿ: ಮೂಲ್ಕಿ ಬಳಿಯ ಕೆರೆಕಾಡುವಿನ “ನಮ್ಮನೆ” ನಿವಾಸದಲ್ಲಿ ನಡೆದ ಯುವ ಪತ್ರಕರ್ತ ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ಅವರು ತಮ್ಮ ಪತ್ನಿ ಉಷಾ ಕೆರೆಕಾಡುವರವರ ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಯ ಅಭಿಯಾನದ ಬಗ್ಗೆ ವಿಶಿಷ್ಠವಾಗಿ ನಡೆಸಿರುವುದು ವಿಶೇಷವಾಗಿದೆ. ಈ ಅಭಿಮಾನಕ್ಕೆ ಚಾಲನೆ ನೀಡಿದವರು ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ದೇಶದಲ್ಲಿಯೇ ಈಗ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಪ್ರತಿಯೊಬ್ಬ ಮತದಾರನು ಸಹ ತಮ್ಮ ತಮ್ಮ ಮತದಾನದ ಬಗ್ಗೆ ಸ್ಪಷ್ಟ ಅರಿವು ಮೂಡಿಸಿಕೊಂಡಲ್ಲಿ ಪ್ರಜಾಪ್ರಭುತ್ವದ ನೈಜ ಘನತೆಯನ್ನು ಎತ್ತಿ ತೋರಿಸಿದಂತಾಗುತ್ತದೆ, ಪ್ರಜಾಪ್ರಭುತ್ವದ ಕೈಗನ್ನಡಿ ಆಗಿರುವ ಮತದಾನ ಪಾರದರ್ಶಕ, ನ್ಯಾಯಸಮ್ಮತವಾಗಿ ನಡೆದಾಗ ದೇಶದ ಬಗ್ಗೆ ಚಿಂತಿಸುವ ಮನೋಭಾವನೆ ಬೆಳೆಯುತ್ತದೆ, ನರೇಂದ್ರ ಕೆರೆಕಾಡುರವರ ಜಾಗೃತಿ ಅಭಿಯಾನದಿಂದ ಇನ್ನಷ್ಟು ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.
ಪತ್ರಕರ್ತ ಶರತ್ ಶೆಟ್ಟಿ ಸಂಕಲಕರಿಯರವರು ಮತದಾನದ ಬಗ್ಗೆ ಹಾಗೂ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ವಾಸ್ತು ತಜ್ಞರು, ಆಧ್ಯಾತ್ಮ ಗುರು, ವೈಜ್ಞಾನಿಕ ಜ್ಯೋತಿಷ್ಯರಾದ ಬೆಂಗಳೂರಿನ ಚಂದ್ರಶೇಖರ ಸ್ವಾಮೀಜಿಯವರ ಸಂಪೂರ್ಣ ಮಾರ್ಗದರ್ಶನ, ಮತದಾನದ ಜಾಗೃತಿ ಅಭಿಯಾನದ ಬಗ್ಗೆ ವಿವಿಧ ಘೋಷಣೆಯ ಪತ್ರವನ್ನು ವಿತರಿಸಲಾಯಿತು, ಚರಣ್ ಅಮಿನ್ ಎಕ್ಕಾರು ಘೋಷಣಾ ಪತ್ರವನ್ನು ವಾಚಿಸಿದರು, ಸೇರಿದ ಜನರು ಮತದಾನವನ್ನು ಮಾಡುವ ಬಗ್ಗೆ ಪ್ರಮಾಣ ಮಾಡಿದರು. ಮಾಧ್ಯಮ ಸ್ನೇಹಿತರ ಸಾಥ್ ಈ ಕಾರ್ಯಕ್ರಮದಲ್ಲಿ ಮೂಡಿಬಂದಿತು. ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ತಮ್ಮ ಪರಿಕಲ್ಪನೆಯ ಮೂಲಕ ಜಾಗೃತಿ ಮೂಡಿಸಿದ ನರೇಂದ್ರ ಕೆರೆಕಾಡು ಮಾತನಾಡಿ ನಮ್ಮ ನಮ್ಮ ಮತದಾನದ ಬಗ್ಗೆ ಸ್ವಯಂ ಪ್ರೇರಿತರಾಗಿ ಜಾಗೃತಿ ಆದರೆ, ಯಾವುದೇ ರಾಜಕೀಯ ಪಕ್ಷದ ಪ್ರಲೋಭನೆಗೆ ಒಳಗಾಗುವ ಅವಕಾಶವೇ ಇಲ್ಲ, ಮತದಾನ ಮಾಡುವುದು ಸಹ ಕರ್ತವ್ಯ ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ ಕಾರ್ನಾಡು, ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕ ಗಿರೀಶ್ ಕಾಮತ್ ಮೂಲ್ಕಿ, ರೋಹನ್ ಸಿ. ಭಟ್, ಉಷಾ ನರೇಂದ್ರ, ಲಕ್ಷ್ಮಣ್ ಅಮಿನ್ ಎಕ್ಕಾರು, ರಾಮಚಂದ್ರ ಬಂಗೇರ ಬಪ್ಪನಾಡು, ಆಶಾ ಪ್ರಕಾಶ್ ಕೋಟ್ಯಾನ್ ಕಾರ್ಕಳ, ಗೀತಾ ತಾರಾನಾಥ ಕೋಟ್ಯಾನ್ ಅಡ್ವೆ, ಮೋನಪ್ಪ ಪೂಜಾರಿ, ಲಕ್ಷ್ಮೀ, ಭಾರತಿ, ಗೋಪಾಲ ಅಂಚನ್ ಇನ್ನಾ, ವಿಮಲಾ ಪೂಜಾರಿ ಅಡ್ವೆ, ಮಲ್ಲಿಕಾ ಬಪ್ಪನಾಡು, ಮುಂಬಯಿಯ ಲೀಲಾದರ ಕೋಟ್ಯಾನ್, ರಘುರಾಮ ಕೋಟ್ಯಾನ್, ವಿಶ್ವನಾಥ ಸಾಲ್ಯಾನ್, ಸದಾನಂದ ಪೂಜಾರಿ, ಚೈತ್ರಾ ಅಮಿನ್ ಎಕ್ಕಾರು ಇನ್ನಿತರರು ಉಪಸ್ಥಿತರಿದ್ದರು.

Kinnigoli-14041414

Comments

comments

Comments are closed.

Read previous post:
Kinnigoli-14041413
ಕಿನ್ನಿಗೋಳಿ ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವ

ಕಿನ್ನಿಗೋಳಿ: ಯಕ್ಷಗಾನ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತಪ್ಪಲ್ಲ , ಆದರೆ ಮೂಲ ಸಂಸ್ಕ್ರತಿ ಚೌಕಟ್ಟು, ಪರಂಪರೆಗೆ ದಕ್ಕೆ ಬಾರದ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು ಎಂದು ಕಸಾಪದ ಮಾಜಿ...

Close