ಕಟೀಲು ದೇವಳ ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ಕಟೀಲು ಶ್ರೀ  ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ದ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಜಯನಾಮ ಸಂವತ್ಸರ ಹಾಗೂ ಕಟೀಲು ದೇವಳದ ವಿಶೇಷ ದಿನಗಳ ಮಾಹಿತಿಯುಳ್ಳ ವಾರ್ಷಿಕ ದಿನದರ್ಷಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ತಾ. 14ಕ್ಕೆ ಸಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ತಂಡದಿಂದ ಗೊಂಬೆಯಾಟ – ನರಕಾಸುರ ಮೋಕ್ಷ ತಾ. 15ಕ್ಕೆ ಡಮರು ನೃತ್ಯ ಕಲಾಕೇಂದ್ರ ಕಿನ್ನಿಗೋಳಿ ಇವರಿಂದ ನೃತ್ಯ ವೈವಿಧ್ಯ, ತಾ. 16ಕ್ಕೆ ಯಕ್ಷಗಾನ ತಾಳಮದ್ದಲೆ – ಸತ್ವ ಪರೀಕ್ಷೆ ನಡೆಯಲಿದ್ದು, ಪದ್ಯಾಣ ಗಣಪತಿ ಭಟ್, ಪದ್ಮನಾಭ ಉಪಾಧ್ಯಾಯ, ಯೋಗೀಶ ಆಚಾರ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಸರ್ಪಂಗಳ ಈಶ್ವರ ಭಟ್, ವಾಸುದೇವ ರಂಗಾ ಭಟ್ಟ, ರಾಮ ಜೋಯಿಸ, ವಾದಿರಾಜ ಕಲ್ಲೂರಾಯ ಭಾಗವಹಿಸಲಿದ್ದಾರೆ. ತಾ. 17ಕ್ಕೆ ಕಲಾತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಹೊಸಬೆಟ್ಟು ಇದರ ಬಾಗ್ಲೋಡಿ ರಾಜೇಶ್ ರಾವ್ ಮತ್ತು ಶಿಷ್ಯರಿಂದ ವೇಣುವಾದನವಿದೆ.
ತಾ. 18ಕ್ಕೆ ವಿದುಷಿ ಡಾ.ಶೋಭಾ ಶಶಿಕುಮಾರ್ ಬೆಂಗಳೂರು ಇವರಿಂದ ಭರತನಾಟ್ಯ, ತಾ.19ಕ್ಕೆ ವಿದ್ವಾನ್ ತ್ರಿಚಿ ಕೆ.ಆರ್.ಕುಮಾರ್ ಮತ್ತು ಬಳಗದಿಂದ ತಾಳಲಯ ವೈವಿಧ್ಯ
ತಾ. 20ಕ್ಕೆ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಯಾದವ ವಿನೋದ ತಾ. 21ರಂದು ಯಕ್ಷಗಾನ – ಗಾನಾರ್ಪಣಂ ಜರಗಲಿದೆ. ಇದರಲ್ಲಿ ಬಲಿಪ ನಾರಾಯಣ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕುಬಣೂರು ಶ್ರೀಧರ ರಾವ್, ಲೀಲಾವತಿ ಬೈಪಾಡಿತ್ತಾಯ, ಪಟ್ಲ ಸತೀಶ ಶೆಟ್ಟಿ, ಹೆರೆಂಜಾಲು ಗೋಪಾಲ ಗಾಣಿಗ, ದಾಂಟಲಿಕೆ ಅನಂತ ಹೆಗಡೆ
ಹರಿನಾರಾಯಣ ಬೈಪಾಡಿತ್ತಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ಎನ್.ಜಿ.ಹೆಗಡೆ ಭಾಗವಹಿಸಲಿದ್ದಾರೆ.

Kinnigoli-14041404 Kinnigoli-14041405 Kinnigoli-14041406 Kinnigoli-14041407 Kinnigoli-14041408 Kinnigoli-14041409 Kinnigoli-14041410 Kinnigoli-14041411

Comments

comments

Comments are closed.

Read previous post:
Kinnigoli-14041403
ನಂದಿನಿ ಮಹಿಳಾ ಮಂಡಲ ಉದ್ಘಾಟನೆ

ಕಿನ್ನಿಗೋಳಿ: ಮಹಿಳೆಯರು ಅರ್ಥಿಕವಾಗಿ, ಶೈಕ್ಷಣಿಕ ಪ್ರಗತಿ ಹೊಂದಿದಾಗ ಸಮಾಜ ಅಭಿವೃದ್ಧಿ ಸಾಧ್ಯವಾಗಬಲ್ಲದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಹೇಳಿದರು. ಭಾನುವಾರ ಕಟೀಲು ಮಲ್ಲಿಗೆಯಂಗಡಿಯಲ್ಲಿ ನಂದಿನಿ ಮಹಿಳಾಮಂಡಲ...

Close