ಕಿನ್ನಿಗೋಳಿ ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವ

ಕಿನ್ನಿಗೋಳಿ: ಯಕ್ಷಗಾನ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತಪ್ಪಲ್ಲ , ಆದರೆ ಮೂಲ ಸಂಸ್ಕ್ರತಿ ಚೌಕಟ್ಟು, ಪರಂಪರೆಗೆ ದಕ್ಕೆ ಬಾರದ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ದಿವಾಣ ಭೀಮ ಭಟ್‌ರವರ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮದ ಅಂಗವಾಗಿ ದಿವಾಣ ಭೀಮ ಭಟ್‌ರವರ ಶಿಷ್ಯವೃಂದ- ಯುಗಪುರುಷ- ಯಕ್ಷಲಹರಿ ಇವರ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಯಕ್ಷಗಾನ ತಾಳಮದ್ದಳೆ- ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಪರಿಸರದ ದಿವಾಣ ಭೀಮ ಭಟ್‌ರವರ ಶಿಷ್ಯವೃಂದ ದಿವಾಣ ಬಳಗವನ್ನು ಈ ಸಂದರ್ಭ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿ ಶುಭ ಹಾರೈಸಿದರು.
ಹವ್ಯಾಸಿ ಯಕ್ಷಗಾನ ಕಲಾವಿದ ವೇಷದಾರಿ ಅಂಬರೀಶ ಶೆಟ್ಟಿ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು.
ಮುರಳೀಧರ ಭಟ್ ಕಟೀಲು ದಿವಾಣ ಭೀಮ ಭಟ್ ಸಂಸ್ಮರಣಾ ಭಾಷಣ ಮಾಡಿದರು. ಶ್ರೀಧರ ಡಿ. ಎಸ್ ಅಭಿನಂದನಾ ಭಾಷಣಗೈದರು. ವಿದ್ವಾನ್ ಹಿರಣ್ಯ ವೆಂಕಟೇಶ ಭಟ್, ಸಂಘಟಕರಾದ ಯುಗಪುರುಷದ ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸಭಟ್, ಉದ್ಯಮಿ ಪೃಥ್ವಿರಾಜ್ ಆಚಾರ್ಯ, ಜಯರಾಮ ಶೆಟ್ಟಿ ಸಾಲೆತ್ತೂರು, ಶಿಷ್ಯವೃಂದದ ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು. ದಿವಾಣ ಗೋವಿಂದ ಭಟ್ ಪ್ರಸ್ತಾವನೆಗೈದರು. ಶಿಷ್ಯವೃಂದದ ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್ ವಂದಿಸಿದರು. ಕಾರ್ಯದರ್ಶಿ ರಘುನಾಥ ಕಾಮತ್ ಕೆಂಚನಕೆರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-14041413

Comments

comments

Comments are closed.

Read previous post:
Kinnigoli-14041412
ಅಂಬೇಡ್ಕರ್ ಜಯಂತಿ

ಕಟೀಲು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಸೋಮವಾರ ಕಟೀಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

Close