ಶಿಮಂತೂರು : ಡಾ| ಅಂಬೇಡ್ಕರ್ ದಿನಾಚರಣೆ

ಕಿನ್ನಿಗೋಳಿ: ದೇಶದ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಕಾರ್ಯತತ್ಪರತೆ ಮತ್ತು ಆದರ್ಶಗಳನ್ನು ಯುವ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಮೂಲ್ಕಿ ಬಿಜೆಪಿ ವತಿಯಿಂದ ಶಿಮಂತೂರು ಕುಚ್ಚಿಗುಡ್ಡೆಯಲ್ಲಿ ಸೋಮವಾರ ನಡೆದ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ,ರಂಗನಾಥ ಶೆಟ್ಟಿ, ಶರತ್ ಕುಬೆವೂರು, ಪ್ರಾಣೇಶ್ ದೇಂದಡ್ಕ, ವಾಮನ್ ಪಂಜಿನಡ್ಕ, ಹರೀಶ ಶೆಟ್ಟಿ ಪರಂಕಿಲ, ಶಾಂತಾರಾಮ ಹೆಗ್ಡೆ, ಕಿಶೋರ್ ಶೆಟ್ಟಿ ತೆಂಗಾಳಿ, ಚಂದ್ರಶೇಖರ ಪಂಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು. ಶರತ್ ಕುಬೆವೂರು ಸ್ವಾಗತಿಸಿ ರಂಗನಾಥ ಶೆಟ್ಟಿ ವಂದಿಸಿದರು.

Kinnigoli-15041402

Comments

comments

Comments are closed.

Read previous post:
Kinnigoli-15041401
ಕಟೀಲು : ಅಂಬೇಡ್ಕರ್ ದಿನಾಚರಣೆ

ಕಟೀಲು : ದೇಶದ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಜನ್ಮ ದಿನಾಚರಣೆ ಕಟೀಲು ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

Close