ಕಿನ್ನಿಗೋಳಿ : ಗೈಲ್ ಪೈಪ್ ಲೈನ್ ಯೋಜನೆ?!?

ಕಿನ್ನಿಗೋಳಿ : ಪಾದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಪಾದೂರು-ತೋಕೂರು ಪೈಪ್‌ಲೈನ್ ಯೋಜನೆ ಪಾದೂರು, ಬೆಳಪು, ಎಲ್ಲೂರು, ಮುದರಂಗಡಿ, ಇನ್ನಾ, ಪಲಿಮಾರು, ಲೈಟ್ ಹೌಸ್ ಹಳೆಯಂಗಡಿ, ಸೂರಿಂಜೆ, ಕಾಟಿಪಳ್ಳ, ಬಾಳ, ತೋಕೂರು ಮೂಲಕ ಕಚ್ಚಾ ತೈಲ ಸಾಗಣೆಯಾಗಲಿದೆ. ಇದರಿಂದಾಗಿ ಪೈಪ್‌ಲೈನ್ ಹಾದುಹೋಗುವ ಈ ಪ್ರದೇಶಗಳಲ್ಲಿನ ನೂರಾರು ಎಕರೆ ಭೂಮಿ ಕಳೆದುಕೊಳ್ಳ ಬೇಕಾದ ಭೀತಿಯನ್ನು ಈಗಾಗಲೇ ಜನತೆ ಎದುರಿಸುತ್ತಿದ್ದಾರೆ.
ಈಗ ಮಗದೊಮ್ಮೆ ಕೇಂದ್ರ ಸರಕಾರದ ಸ್ವಾಮ್ಯಕ್ಕೊಳ ಪಟ್ಟ ಗೈಲ್ ಸಂಸ್ಥೆಯು ಶಿಬರೂರು ನಡುಗೋಡು, ಕಿನ್ನಿಗೋಳಿ ಪರಿಸರದ ಬಟ್ಟಕೋಡಿ, ಗೋಳಿಜೋರ, ಗುತ್ತಕಾಡು, ಶಾಂತಿಪಲ್ಕೆ ಕೊಲ್ಲೂರು ಕುಕ್ಕಟ್ಟೆ ಸಮೀಪ ಸಂಖ್ಯೆಗಳನ್ನು ಬರೆದಿರುವ ಗುರುತು ಕಂಬಗಳನ್ನು ನೆಟ್ಟಿದೆ. ಈ ಪೈಪ್‌ಲೈನ್ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಾದು ಹೋಗುವ ಗುಮಾನಿ ಇದೆ. ಎರಡು ದಿನಗಳ ಹಿಂದೆ ಸಂಜೆ ಅಥವಾ ರಾತ್ರಿ ಹೊತ್ತು ಗುರುತು ಕಂಬಗಳನ್ನು ಜನರಿಗೆ ಮಾಹಿತಿ ಕೊಡದೆ ಹಾಕಿರುವುದು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಪಾದೂರು-ತೋಕೂರು ಪೈಪ್‌ಲೈನ್ ಅಲ್ಲಿನ ಜನರ ಒತ್ತಡಕ್ಕೆ ಮಣಿದು ಈ ಪರಿಸರಕ್ಕೆ ಬಂದಿರಬಹುದೇ? ಅಥವಾ ಹರಿಹರ ಮಂಗಳೂರು ಗ್ಯಾಸ್ ಪೈಪ್ ಲೈನ್ ಯೋಜನೆ ಇದಿರಬಹುದೇ? ಎಂದು ಜನರಾಡಿಕೊಳ್ಳುತ್ತ್ತಿದ್ದಾರೆ.

ಪೈಪ್‌ಲೈನ್ ಹಾದು ಹೋಗುವ ಭೂಮಿಯನ್ನು ರೈತರಿಗೆ ವಾಪಸು ನೀಡುವುದಾಗಿ ಕಂಪೆನಿ ಹೇಳಿಕೊಳ್ಳುತ್ತಿದ್ದರೂ, ಈ ಭೂಮಿಯನ್ನು ಯಾವುದೇ ಕಾರ್ಯಕ್ಕೆ ಬಳಸಿ ಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಕಂಪೆನಿ ಹೇಳುವಂತೆ ಪೈಪ್ ಲೈನ್ ಹಾದು ಹೋಗುವ ಭೂಮಿಯ ಬಳಿ ಮನೆಗಳ ನಿರ್ಮಾಣ, ಬಾವಿ ತೋಡುವಿಕೆ, ಆಳವಾದ ಬೇರು ಬಿಡುವ ಮರಗಳನ್ನು ನೆಡುವುದು, ಬಡಾವಣೆ ನಿರ್ಮಾಣ ಕಾರ್ಯಕ್ಕೆ ಬಳಸುವುದನ್ನು ನಿಷೇಧಿಸಲಾಗು ವುದು. ಸಾಮಾನ್ಯ ಕಾರ್ಯಗಳಿಗೆ ನೀರಾವರಿಗಾಗಿ ಪೈಪ್‌ಗಳನ್ನು ಹಾಕಿ ಕೊಳ್ಳಲು ಬಳಸಿಕೊಳ್ಳುವುದಕ್ಕೆ ಅಡ್ಡಿ ಯಿಲ್ಲ ಎಂದು ಕಂಪೆನಿ ಹೇಳುತ್ತಿದೆ. ಅಂದರೆ ಈ ಜಾಗ ರೈತರಿಗೆ ಹಿಂದಿರುಗಿಸಿದರೂ ಅದು ನಿರುಪಯೋಗಿಯಾಗಿರುತ್ತದೆ.
ಕಾಯಿದೆಯ ಪ್ರಕಾರ ಪೈಪ್ ಲೈನ್ ಹಾದುಹೋಗುವ ಪ್ರದೇಶದ ಭೂಮಾಲಕರಿಗೆ ಅವರ ಜಮೀನಿಗೆ ಇರುವ ಮಾರುಕಟ್ಟೆ ಬೆಲೆಯ ಕೇವಲ ಶೇಕಡಾ 10 ರಷ್ಟು ಪರಿಹಾರವನ್ನು ನೀಡಲಾಗುತ್ತದೆ. ನೆಲದಲ್ಲಿ ಐದು ಮೀಟರ್ ಆಳದಲ್ಲಿ ಹಾಕಲಾಗುವ ಪೈಪ್‌ಲೈನ್‌ನ ಮೇಲಿನ ಜಮೀನಿನಲ್ಲಿ ರೈತರು ಬೇಸಾಯವನ್ನು ಮಾಡ ಬಹುದಾಗಿದ್ದು ಆಳವಾಗಿ ಬೇರೂರುವ ಮರ ನೆಡುವಂತಿಲ್ಲ. ತೆಂಗು, ಕಂಗಿನ ಕೃಷಿ ಮಾಡುವಂತಿಲ್ಲ. ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಮಾರಾಟ ಮಾಡುವಂತಿಲ್ಲ.ಹೀಗಾಗಿ ಈ ಭೂಮಿಯ ಮೇಲಿನ ಶೇಕಡಾ 90ರಷ್ಟು ಅಧಿಕಾರವನ್ನು ಭೂಮಾಲಕರು ಕಳೆದುಕೊಳ್ಳುತ್ತಾರೆ.ಎಂದು ಹೇಳಲಾಗುತ್ತಿದೆ.

ಈಗಾಗಲೇ ಹಲವಾರು ಸಂಸ್ಥೆಗಳು ಮಂಗಳೂರಿಗೆ ಬಂದಿದ್ದು ಜಿಲ್ಲೆಯ ಜನರ ಉದ್ಯೋಗಕ್ಕೆ ವಿಫುಲ ಅವಕಾಶ ದೊರೆಯುವ ನಿಟ್ಟಿನಲ್ಲಿ ನಾವೆಲ್ಲಾ ಈ ಯೋಜನೆಗಳಿಗೆ ಬೆಂಬಲ ನೀಡಿದ್ದೇವೆ. ಎಸ್.ಇ.ಝಡ್, ಎಮ್.ಆರ್.ಪಿ.ಎಲ್, ಎಚ್.ಪಿ.ಸಿ.ಎಲ್ ಹೀಗೆ ಅನೇಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಪ್ರಗತಿಗೆ ನಮ್ಮ ವಿರೋಧವಿಲ್ಲ. ಕೃಷಿಕರ ಫಲವತ್ತಾದ ಭೂಮಿಯ ಮೇಲೆ ಹಾದು ಹೋಗುವ ಯಾವೂದೇ ಕಂಪನಿಯ ಪೈಪ್ ಲೈನ್‌ಗೆ ನಮ್ಮ ವಿರೋಧವಿದೆ ಈಗ ಮತ್ತೊಮ್ಮೆ ಗೈಲ್ ಸಂಸ್ಥೆಯು ಜಿಲ್ಲೆಯ ವಿವಿಧ ಭಾಗದ ಕೃಷಿ ಭೂಮಿ ಮೇಲೆ ಕೈಯಾಡಿಸುತ್ತಿರುವುದು ವಿಷಾದನೀಯ ಎಂದು ಜನರು ದುಗುಡ ವ್ಯಕ್ತಪಡಿಸುತ್ತಿದ್ದಾರೆ.

Kinnigoli-16041406 Kinnigoli-16041407

ಗುತ್ತಕಾಡು ನಾಗಬನದ ಬಳಿಯ ರಸ್ತೆ

Kinnigoli-16041408

ಗುತ್ತಕಾಡು ಹಿಲ್ ಟಾಪ್ ಮನೆ ಬಳಿಯ ರಸ್ತೆ

Kinnigoli-16041409

ಗೋಳಿಜೋರ ರಸ್ತೆ

Comments

comments

Comments are closed.