ಮತದಾರರಿಗೆ ವಿಶೇಷ ಸೌಲಭ್ಯ

ಮುಲ್ಕಿ: ಮತದಾನ ಕೇಂದ್ರ ಪ್ರದೇಶದಲ್ಲಿ ಸ್ವಾಗತ ಗೋಪುರ, ಮತದಾನ ಮಾಹಿತಿ ಭಿತ್ತಿ ಪತ್ರ, ಮತದಾನ ಸರತಿಗಾಗಿ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ,ಕುಡಿಯಲು ಶುದ್ದ ನೀರು, ಮೆತ್ತನೆಯ ನೆಲಹಾಸಿನೊಂದಿಗೆ ಕೂಲರ್ ಫ್ಯಾನ್ ವ್ಯವಸ್ಥೆ, ಪಂಚಾಯತ್ ಸಿಬ್ಬಂದಿಗಳಿಂದ ಹೆಲ್ಪ್ ಡೆಸ್ಕ್, ಪ್ರಥಮ ಚಿಕಿತ್ಸೆ ಗಾಗಿ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ದಾದಿಗಳು ಇದು ಮೂಲ್ಕಿ ನಗರ ಪಂಚಾಯತ್ ವತಿಯಿಂದ ನಿರ್ಮಿಸಲಾದ 109ನೇ ಅಪೂರ್ವ ಮಾದರಿ ಮತಗಟ್ಟೆ. ನಗರ ಪಂಚಾಯತ್ ಸಭಾಂಗಣದಲ್ಲಿ ಮತಗಟ್ಟೆ ನಿರ್ಮಿಸಲಾಗಿದ್ದು ಮತದಾನದ ಬಳಿಕ ಮತದಾನ ನೀಡಿದಕ್ಕಾಗಿ ಕೃತಜ್ಞತೆಗಳು ಎಂಬ ಸ್ಲೋಗನ್ ಇರುವ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಸ್ಟಿಕ್ಕರ್ ನೀಡಿ ಪಂಚಾಯತ್ ಸಿಬ್ಬಂಧಿಗಳ ಕೃತಜ್ಞತಾ ಮಾತುಗಳು. ಬಳಿಕ ಆಸಕ್ತ ಮತದಾರರಿಗಾಗಿ ಈ ಕೃತಜ್ಞತಾ ಸ್ಟಿಕ್ಕರ್ ಹಿಡಿದ ಪೋಟೋ ಉಚಿತವಾಗಿ ಮತದಾರರ ಇ-ಮೈಲ್ ಗೆ ರವಾನೆ ಈ ಎಲ್ಲಾ ಸೌಲಭ್ಯಗಳನ್ನು ಮುಲ್ಕಿ ನಗರ ಪಂಚಾಯತ್ ಚೊಚ್ಚಲ ಬಾರಿಗೆ ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನೀಡುತ್ತಿದೆ. ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ವಿ.ಆಳ್ವಾ ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 2 ಮತಗಟ್ಟೆಗಳಿದ್ದು ಅಲ್ಲಿಗೆ ನೀರು, ಊಟೋಪಚಾರ ಹಾಗೂ ಕೆಲವೆಡೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.

Kinnigoli-17041408

Kinnigoli-17041409

ಕುರ್ಚಿ ಸಹಾಯದಲ್ಲಿ ಮತದಾನ ಮಾಡಿದ ವೃದ್ದೆ 

Kinnigoli-17041410

ಕೆ.ಎಸ್.ರಾವ್ ನಗರ ನಿವಾಸಿ ಸರೋಜಿನಿ ಅಂಚನ್ (80) ಕೆಂಚನಕೆರೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 

Kinnigoli-17041411

ಸೂಕ್ಷ್ಮ ಪ್ರದೇಶವಾದ ಲಿಂಗಪ್ಪಯ್ಯಕಾಡು ಮತದಾನ ಕೇಂದ್ರ

Kinnigoli-17041412

 

Comments

comments

Comments are closed.

Read previous post:
Kinnigoli-16041406
ಗೈಲ್ ಪೈಪ್ ಲೈನ್ ಗುರುತು ಕಂಬಗಳ ನಿಗೂಢ ನಾಪತ್ತೆ

ಕಿನ್ನಿಗೋಳಿ : ಕಿನ್ನಿಗೋಳಿ ಪರಿಸರದ ಶಿಬರೂರು, ನಡುಗೋಡು, ಬಟ್ಟಕೋಡಿ, ಗೋಳಿಜೋರ, ಗುತ್ತಕಾಡು, ಶಾಂತಿಪಲ್ಕೆ ಕೊಲ್ಲೂರು ಕುಕ್ಕಟ್ಟೆ ಸಮೀಪ ಸಂಖ್ಯೆಗಳನ್ನು ಬರೆದಿರುವ ಗುರುತು ಕಂಬಗಳನ್ನು ನೆಟ್ಟಿದ್ದು ಗುರುವಾರ ಬೆಳಿಗ್ಗೆ ಕಿನ್ನಿಗೋಳಿ...

Close