ಗೈಲ್ ಪೈಪ್ ಲೈನ್ ಗುರುತು ಕಂಬಗಳ ನಿಗೂಢ ನಾಪತ್ತೆ

ಕಿನ್ನಿಗೋಳಿ : ಕಿನ್ನಿಗೋಳಿ ಪರಿಸರದ ಶಿಬರೂರು, ನಡುಗೋಡು, ಬಟ್ಟಕೋಡಿ, ಗೋಳಿಜೋರ, ಗುತ್ತಕಾಡು, ಶಾಂತಿಪಲ್ಕೆ ಕೊಲ್ಲೂರು ಕುಕ್ಕಟ್ಟೆ ಸಮೀಪ ಸಂಖ್ಯೆಗಳನ್ನು ಬರೆದಿರುವ ಗುರುತು ಕಂಬಗಳನ್ನು ನೆಟ್ಟಿದ್ದು ಗುರುವಾರ ಬೆಳಿಗ್ಗೆ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಭಟ್ಟಕೋಡಿಯ ರಸ್ತೆ ಬದಿಯ ಇಕ್ಕಲೆಯಲ್ಲಿ ಹಾಕಿದ ಗುರುತು ಕಂಬಗಳು ನಾಪತ್ತೆಯಾಗಿದೆ. ರಾತ್ರಿ ತನಕ ಇದ್ದ ಗುರುತು ಕಂಬಗಳು ಮುಂಜಾನೆಯ ದಿನ ಪತ್ರಿಕೆಗಳ ವರದಿಗಳನ್ನು ನೋಡಿ ಯಾರೋ ಕಿಡಿಗೇಡಿಗಳು ಕಂಬಗಳು ಕಿತ್ತು ಹಾಕಿರಬಹುದು ಎಂದು ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ತಿಳಿಯಪಡಿಸಿದರು.
ಕಿನ್ನಿಗೋಳಿಯ ಒಳರಸ್ತೆಗಳಲ್ಲಿ ಜನರು ಕಂಬಗಳನ್ನು ಗಮನಿಸುವುದಿಲ್ಲವಾದರೂ ರಾಜ್ಯ ಹೆದ್ದಾರಿಯ ರಸ್ತೆಯ ಗುರುತು ಕಂಬಗಳನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲರೆಂಬ ಹಿನ್ನಲೆಯಲ್ಲಿ ಕಂಬಗಳು ನಾಪತ್ತೆಯಾಗಿದೆ. ಕಂಬಗಳ ನಿಗೂಢ ನಾಪತ್ತೆಯ ಹಿಂದೆ ಯಾವುದಾದರೂ ರಾಜಕೀಯ ಪಕ್ಷಗಳ ಕೈವಾಡ ಇದ್ದಿರಲೂಬಹುದು ಮತ್ತು ಗುರುವಾರ ಮತದಾನ ದಿನವಾಗಿರುವುದರಿಂದ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ನಿಖರ ಮಾಹಿತಿ ಸಿಕ್ಕಿದರೆ ತಮ್ಮ ಪಕ್ಷಕ್ಕೆ ಮತದಾನದಲ್ಲಿ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಬಹುದೆಂಬ ಉದ್ದೇಶದಿಂದ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಗುರುತು ಕಂಬಗಳನ್ನು ತೆಗೆದು ಹಾಕಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

 Kinnigoli-16041406

Comments

comments

Comments are closed.

Read previous post:
ಸ್ಥಗಿತ ಗೊಂಡ ಮತ ಯಂತ್ರ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಅತ್ತೂರು-ಕೆಮ್ರಾಲ್ ಮತಗಟ್ಟೆಯಲ್ಲಿ ಬೆಳಿಗ್ಗೆ ಮತ ಯಂತ್ರ ಸ್ಥಗಿತಗೊಂಡ ಕಾರಣ ಸುಮಾರು 40 ನಿಮಿಷ ಮತದಾನ ತಡವಾಗಿ ಆರಂಭವಾದ ಘಟನೆ ನಡೆದಿದೆ,...

Close