ಶಿಕ್ಷಣ ಮತ್ತು ಸಾಮಾಜಿಕ ಶಾಂತಿಯಿಂದ ಅಭಿವೃದ್ಧಿ

ಕಿನ್ನಿಗೋಳಿ : ಶಿಕ್ಷಣ ಮತ್ತು ಸಾಮಾಜಿಕ ಶಾಂತಿಯಿಂದ ಅಭಿವೃದ್ಧಿ ಸಾಧ್ಯ. ಯುವಕರ ಧ್ಯೇಯ, ಶಿಕ್ಷಣ ಮತ್ತು ಜನಸೇವೆಯಾಗಿರಬೇಕು ಮೌಲ್ಯಾಧಾರಿತ ಸಮಾಜವನ್ನು ಕಟ್ಟಲು ಯುವಕರು ಪ್ರಯತ್ನಿಸಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆವರೆಂಡ್ ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಹೇಳಿದರು.
ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಮೈದಾನದಲ್ಲಿ ನಡೆದ ಭಾರತೀಯ ಕಥೋಲಿಕ್ ಯುವ ಸಂಚಲನ ಕಿನ್ನಿಗೋಳಿ ವಲಯದ ದ್ವಿದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಐ.ಸಿ.ವೈ.ಎಂ. ದ್ವಿದಶಮಾನೋತ್ಸವ ಸ್ಮರಣ ಸಂಚಿಕೆ ಹಾಗೂ ದೈವಿಕ್ ಉಜ್ವಾಡ್ ಪುಸ್ತಕವನ್ನು ಬಿಷಪ್ ರೆವರೆಂಡ್ ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಬಿಡುಗಡೆಗೊಳಿಸಿದರು.
ಉದ್ಯಮಿ ಏಲಿಯಾಸ್ ಸಾಂತೀಸ್, ಐ.ಸಿ.ವೈ.ಎಂ. ಮಂಗಳೂರು ಒಕ್ಕೂಟದ ನಿರ್ದೇಶಕ ಫಾ. ರೋನಾಲ್ಡ್ ಡಿಸೋಜ, ಅಧ್ಯಕ್ಷ ಶೆಲ್ಡನ್ ಕ್ರಾಸ್ತಾ, ಐ. ಸಿ. ವೈ. ಎಂ ಕಿನ್ನಿಗೋಳಿ ವಲಯ ಕಾರ್ಯದರ್ಶಿ ಮನೋಜ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ವಲಯದ ಐ. ಸಿ. ವೈ. ಎಂ ನಿರ್ದೇಶಕ ಫಾ| ವಿನೋದ್ ಲೋಬೊ ಪ್ರಸ್ತಾವನೆಗೈದು ಸ್ವಾಗತಿಸಿದರು. ಐ. ಸಿ. ವೈ. ಎಂ ಕಿನ್ನಿಗೋಳಿ ವಲಯಾಧ್ಯಕ್ಷೆ ಮೆಲ್ರೀಡ ರೊಡ್ರಿಗಸ್ ವಂದಿಸಿದರು. ಜೋಯನ್ ಡಿಸೋಜ ಹಾಗೂ ರೊಮೀಲಾ ಪಿಯುಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21041402 Kinnigoli-21041403 Kinnigoli-21041404 Kinnigoli-21041405

Comments

comments

Comments are closed.

Read previous post:
Kinnigoli-21041401
ಕೊಡೆತ್ತೂರು ನವರಾತ್ರಿ ಮೆರವಣಿಗೆಗೆ ಸುವರ್ಣ ಸಂಭ್ರಮ

ಕಿನ್ನಿಗೋಳಿ : ಕಟೀಲಿಗೆ ನವರಾತ್ರಿಯ ಲಲಿತಾ ಪಂಚಮಿಯಂದು ಕೊಡೆತ್ತೂರು ಮೂಡುಮನೆಯಿಂದ ಬರುವ ನವರಾತ್ರಿ ಮೆರವಣಿಗೆಗೆ ಈ ವರ್ಷ ಐವತ್ತರ ಸಂಭ್ರಮ. ಈ ಹಿನ್ನಲೆಯಲ್ಲಿ ಮೆರವಣಿಗೆಯನ್ನು ಅತ್ಯಂತ ವೈಭವವಾಗಿ ಆಚರಿಸಬೇಕೆಂದು...

Close