ಮುಕ್ಕ: ಕಾರಿಗೆ ಖಾಸಗಿ ಬಸ್ ಡಿಕ್ಕಿ

ಕಿನ್ನಿಗೋಳಿ : ಸುರತ್ಕಲ್ ಸಮೀಪದ ಮುಕ್ಕಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು,  ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ಟಾಟಾ ಸಿಯಾರ ಟೂರಿಸ್ಟ್ ಕಾರು ಹಾಗೂ ವಿಆರ್‌ಎಲ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಾಲಾಡಿಯ ನಿವಾಸಿಗಳಾದ ಸುಧಾಕರ್ (47), ಮಹೇಶ್ (27), ಪ್ರತಾಪ್ (22), ತೆಕ್ಕಟ್ಟೆಯ ನಿವಾಸಿ ಸತೀಶ್ (40), ಬೆಂಗಳೂರಿನ ನಿವಾಸಿ ದೇವರಾಜ್ (38) ಹಾಗೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಕಾರಿನ ಚಾಲಕ ಶಿವಕುಮಾರ್ (25), ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಒಟ್ಟು ಆರು ಜನರು ಪ್ರಯಾಣಿಸುತ್ತಿದ್ದರು ಇವರಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಐವರು ಪ್ರಯಾಣಿಕರಿಗೂ ಸಹ ಗಾಯವಾಗಿದೆ ಎಂದು ಹೇಳಲಾಗಿದೆ. ಕಾರು ಕುಂದಾಪುರದಿಂದ ಬೆಂಗಳೂರಿನತ್ತ ಸಾಗುತ್ತಿದ್ದು ಹಾಗೂ ಬೆಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಬಸ್ ಡಿಕ್ಕಿ ಎದುರಿನಿಂದ ಹೊಡೆದಿದೆ ಎನ್ನಲಾಗಿದೆ.
ಕಾರಿನಲ್ಲಿದ್ದವರು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ನೌಕರಿ ಮಾಡುತ್ತಿದ್ದರು ಎನ್ನಲಾಗಿದೆ. ಎ.19 ರಂದು ಕುಂದಾಪುರದ ಹಾಲಾಡಿಗೆ ಬೆಂಗಳೂರಿನಿಂದ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಎ.20, ಎ.21 ರಂದು ಮದುವೆ ಹಾಗೂ ಅರತಕ್ಷತೆ ಕಾರ್ಯಕ್ರಮ ಮುಗಿಸಿ ಇಂದು ಮುಂಜಾನೆ 5.30 ರ ಸುಮಾರಿಗೆ ಹಾಲಾಡಿ ಮನೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಸಂದರ್ಭದಲ್ಲಿ ಬೆಳಗ್ಗೆ 8.30 ರ ಸುಮಾರಿಗೆ ಮುಕ್ಕದ ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಖಾಸಗೀ ಬಸ್‌ನ ನಡುವೆ ಅಪಘಾತವಾಗಿ ಈ ಘಟನೆ ಸಂಭವಿಸಿದೆ.
ಗಾಯಾಳು ಮಹೇಶ್ ಹಾಗೂ ಪ್ರತಾಪ್‌ರವರ ಸಹೋದರನ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು ಎನ್ನಲಾಗಿದೆ. ಗಾಯಾಳುಗಳೆಲ್ಲರು ಖಾಸಗೀ ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kinnigoli-22041403

Comments

comments

Comments are closed.

Read previous post:
Kinnigoli-22041401
ಶ್ರೀ ಮಾರಿಯಮ್ಮ ದೇವಸ್ಥಾನ ಮಾರಿಪೂಜಾ ಮಹೋತ್ಸವ

ಕಿನ್ನಿಗೋಳಿ : ಶ್ರೀ ಮಾರಿಯಮ್ಮ ದೇವಸ್ಥಾನ ಮಾರಡ್ಕ ಇದರ ಮಾರಿಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ.

Close