ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ಹದಿಹರೆಯದ ಮಕ್ಕಳಲ್ಲಿ ಆರೋಗ್ಯ ಬಗ್ಗೆ ಜಾಗೃತಿ ಮತ್ತು ಮಾಹಿತಿ ಇದ್ದರೆ ಮುಂದಾಗಬಹುದಾದ ದೈಹಿಕ, ಮಾನಸಿಕ ತೊಂದರೆಗಳನ್ನು ತಡೆಗಟ್ಟಿ ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು ಎಂದು ಮುಲ್ಕಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಜೋಯೆಲ್ ಹೆರಾಲ್ಡ್ ಡಿಸೋಜಾ ಹೇಳಿದರು.
ತಪೋವನ, ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ರಾಷ್ಟ್ರೀಯ ಸೇವಾ ಘಟಕ ಮತ್ತು ರೋವರ್ಸ್ ಘಟಕ, ಎಂ. ಆರ್.ಪೂಂಜಾ ಐ.ಟಿ.ಐ., ತಪೋವನ ಮತ್ತು ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯ , ದೇರಳಕಟ್ಟೆ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಮಂಗಳವಾರ ನಡೆದ ವೈದ್ಯಕೀಯ ಚಿಕಿತ್ಸಾ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಡಾ| ಆನಂದ್ ಸಲ್ದಾನ, ಕ್ಷೇಮ, ದೇರಳಕಟ್ಟ ಇವರು ಶಿಬಿರದ ಮಹತ್ವವನ್ನು ತಿಳಿಸಿದರು. ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ರಘುರಾಮ್ ರಾವ್ ಸ್ವಾಗತಿಸಿ ಶ್ರೀ ಸುರೇಶ್ ಎಸ್. ವಂದಿಸಿದರು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23041402Kinnigoli-23041403

Comments

comments

Comments are closed.

Read previous post:
ಕೆ.ಬಾಬಣ್ಣ ನಾಯ್ಕ್

ಮೂಲ್ಕಿ: ಕಿಲ್ಪಾಡಿ ಶ್ರೀ ವಿರಭದ್ರ ಮಹಮ್ಮಾಯಿ ದೇವಳದ ಸಮೀಪದ ನಿವಾಸಿ ಕೆ.ಬಾಬಣ್ಣ ನಾಯ್ಕ್(78) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮೂಲ್ಕಿ ಅಂಚೆ ಕಛೇರಿ ನೌಕರರಾಗಿ ಟೆಲಿಗ್ರಾಂ...

Close