ಕೋಳಿ ಮರಿ : ಪ್ರಕೃತಿ ವೈಚಿತ್ರ್ಯ

ಕಿನ್ನಿಗೋಳಿ : ಸುಡು ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳುವುದೇ ಒಂದು ದೊಡ್ಡ ಕಾರ್ಯ ಎನಿಸಿದೆ ಅದರಲ್ಲೂ ಕರ್ನಾಟಕ ಕರಾವಳಿಯಲ್ಲಿ ಜನರು ಹೊರ ಬರಲು ಹೆದರುತಿದ್ದರೆ, ಕೋಳಿ ಮರಿಯೊಂದು ತನ್ನ ತಾಯಿಯನ್ನು ಕಾಯದೆ ತಾನೇ ಮೊಟ್ಟೆ ಒಡೆದು ಹೊರ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಊರ ನಾಟಿ ಕೋಳಿ ಸಾಕಣೆ ಸಾಮಾನ್ಯವಾಗಿದ್ದು ಕಿನ್ನಿಗೋಳಿಯ ಪಕ್ಷಿಕೆರೆ ಸಮೀಪದ ಪಂಜ ಜಾರಂದಾಯ ದೈವಸ್ಥಾನದ ಬಳಿ ಇರುವ ಪದ್ಮನಾಭ ಬೆಳ್ಚಡ ಎಂಬುವವರ ಮನೆಯಲ್ಲಿ ಹೇಂಟೆಯೊಂದು ಮೊಟ್ಟೆಯನ್ನಿಟ್ಟು ಮರಿಮಾಡಿತ್ತು, ಈ ಹೇಂಟೆ ಇದುವರೆಗೆ 2 ಬಾರಿ ಮೊಟ್ಟೆ ಇಟ್ಟು ಮರಿಮಾಡಿದ್ದು, ೨ ಸಲವೂ ಸುಮಾರು 25 ರಷ್ಟು ಮೊಟ್ಟೆಯನ್ನಿಟ್ಟಿತ್ತು, ಈ ಸಲ ಇದುವರೆಗೆ 20 ಮೊಟ್ಟೆಗಳನ್ನಿಟ್ಟಿದ್ದು ಮೊಟ್ಟೆಯನ್ನಿಡುವುದನ್ನು ಮುಂದುವರಿಸಿದ್ದು ಮೊಟ್ಟೆಗಳನ್ನು ಪದ್ಮನಾಭ ಅವರು ಅವರ ಮನೆಯ ಪಕ್ಕದಲ್ಲೇ ಇರುವ ಪಂಪ್ ಶೆಡ್ ನಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಶೇಖರಿಸಿ ಸಿದ್ದರು, ಆದರೆ ಸೋಮವಾರ ಸಂಜೆ ಪಂಪ್ ಶೆಡ್‌ನಲ್ಲಿ ಕೊಳಿ ಮರಿಯ ಕೂಗು ಕೇಳಿಸುವಾಗ ಪದ್ಮನಾಭ ಅವರಿಗೆ ಆಶ್ಚರ್ಯವಾಗಿತ್ತು, ಯಾಕೆಂದರೆ ಹೆಂಟೆಯು ಮೊಟ್ಟೆಯ ಮೇಲೆ ಕುಳಿತು ಕಾವು ಕೊಟ್ಟು ಮರಿಮಾಡುತ್ತಿದ್ದರೆ, ಇದು ಮೊಟ್ಟೆಯೊಡೆದು ಅದರಿಂದ ಮರಿ ತನ್ನಿಂದ ತಾನೇ ಹೊರ ಬಂದಿತ್ತು, ಅಲ್ಲದೆ ಇನ್ನೆರಡು ಮೊಟ್ಟೆಗಳಿಂದ ಮರಿಗಳು ಹೊರ ಬರುವ ಲಕ್ಷಣ ಗೊಚರಿಸುತ್ತಿತ್ತು. ಸ್ಥಳೀಯ ಜನರಿಗೆ ಇದು ಕೌತುಕದ ವಿಷಯವಾಗಿತ್ತು. ಸಾಮಾನ್ಯವಾಗಿ ನಾಟಿ ಕೊಳಿಗಳು ಮೊಟ್ಟೆ ಇಟ್ಟು ಅದಕ್ಕೆ ಕಾವು ಕೊಟ್ಟು ೨೨ ದಿನಗಳಲ್ಲಿ ಮರಿ ಮಾಡುತ್ತದೆ, ಆದರೆ ಈ ಕೊಳಿ ಮೊಟ್ಟೆಯಿಂದ ಮರಿ ಹೇಗೆ ಹೊರಬಂತೆಂದರೆ, ಬಿಸಿಲಿನ ಬೇಗೆಗೆ ನೈಸರ್ಗಿಕ ಕಾವಿನ ಪ್ರಕ್ರಿಯೆ ನಡೆದು ಮೊಟ್ಟೆಯಲ್ಲಿ ಮರಿಯಾಗಿ ಹೊರಬಂದಿದೆ. ಸೆಖೆಗಾಲದಲ್ಲಿ ಕೆಲವು ಕೊಳಿಗಳು ಸೆಖೆಯನ್ನು ತಾಳಲಾರದೆ ಸರಿಯಾಗಿ ಕಾವು ಕೊಡಲಾಗದೆ ಮರಿ ಮಾಡುವುದಿಲ್ಲ ಆದರೆ ಪ್ರಕೃತಿದತ್ತವಾಗಿ ಹೊರ ಬರಬೇಕಿದ್ದ  ಮೊಟ್ಟೆಯಲ್ಲಿ  ಮರಿಯಾಗಿ ಹೊರ ಬಂದದ್ದು ಸೊಜಿಗವೇ ಸರಿ.

Kinnigoli-23041404Kinnigoli-23041405Kinnigoli-23041406Kinnigoli-23041407

Comments

comments

Comments are closed.

Read previous post:
Kinnigoli-23041403
ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ಹದಿಹರೆಯದ ಮಕ್ಕಳಲ್ಲಿ ಆರೋಗ್ಯ ಬಗ್ಗೆ ಜಾಗೃತಿ ಮತ್ತು ಮಾಹಿತಿ ಇದ್ದರೆ ಮುಂದಾಗಬಹುದಾದ ದೈಹಿಕ, ಮಾನಸಿಕ ತೊಂದರೆಗಳನ್ನು ತಡೆಗಟ್ಟಿ ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು ಎಂದು ಮುಲ್ಕಿ ರೋಟರಿ...

Close