ಕಟೀಲು ವಸಂತ ವೇದ ಶಿಬಿರ

ಕಿನ್ನಿಗೋಳಿ : ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾರ್ಥಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು ಎಂದು ಹಿರಿಯ ವಿದ್ವಾಂಸ ಕೃಷ್ಣ ಭಟ್ ಅಂಗಡಿಮಾರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಸಂಜೀವಿನಿ ಟ್ರಸ್ಟ್ ಮುಂಬೈ ಹಾಗೂ ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಬುಧವಾರ ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ವಸಂತ ವೇದ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ, ಕಟೀಲು ದೇವಳ ಅರ್ಚಕ ಹರಿ ನಾರಾಯಣ ಆಸ್ರಣ್ಣ, ಉಪಸ್ಥಿತರಿದ್ದರು.
ಸಂಜೀವಿನಿ ಟ್ರಸ್ಟ್‌ನ ಡಾ| ಸುರೇಶ್ ರಾವ್, ಉಪನ್ಯಾಸಕ ನಾಗರಾಜ್ ಭಟ್ ವೇದ ಘೋಷದೊಂದಿಗೆ ಪ್ರಾರ್ಥಿಸಿದರು, ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಕಾಲೇಜು ಪ್ರಿನ್ಸಿಪಾಲ್ ಡಾ| ಪದ್ಮನಾಭ ಮರಾಠೆ ಸ್ವಾಗತಿಸಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-24041402 Kinnigoli-24041403 Kinnigoli-24041404

Comments

comments

Comments are closed.

Read previous post:
Florine Veigas

Florine Veigas (Pullu Bai) Date Of Birth: 03/01/1935 Expired on    : 24/04/2014 Address          : Flora Villa...

Close