ಮೂಲ್ಕಿ: ಬೀಳ್ಕೋಡುಗೆ ಸಮಾರಂಭ

ಮೂಲ್ಕಿ: ಪ್ರಾಮಾಣಿಕ ಕಾರ್ಯ ನಡೆಸಿದಲ್ಲಿ ಮಾತ್ರ ಸಾಧನೆಯ ಉತ್ತುಂಗವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಮೂಲ್ಕಿ ವಿಜಯಾ ಬ್ಯಾಂಕ್ ಪ್ರಭಂದಕ ಉದಯ ಕುಮಾರ್ ಹೆಗ್ಡೆ ಹೇಳಿದರು.
ಮೂಲ್ಕಿ ವಿಜಯಾ ರೈತ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಕಛೇರಿಯಲ್ಲಿ ವಿಜಯಾ ಬ್ಯಾಂಕ್ ಪ್ರಭಂದಕ ಉದಯ ಕುಮಾರ್ ಹೆಗ್ಡೆ ಹಾಗೂ ವಿಜಯಾ ರೈತ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ನಿರ್ದೇಶಕ ಅಜಯ್ ಗೌಡ ರವರಿಗೆ ಶುಕ್ರವಾರ ನಡೆದ ಬೀಳ್ಕೋಡುಗೆ ಸಮಾರಂಭದಲ್ಲಿ ಬ್ಯಾಂಕ್ ಆಡಳಿತ ಮತ್ತು ಸಿಬ್ಬಂದಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾರ್ವಜನಿಕ ಸೇವೆ ಅತೀ ಸಂಕೀರ್ಣವಾಗಿದ್ದು ಹಲವಾರು ಪ್ರಯೋಭನೆಗಳು ಎದುರಾಗುತ್ತದೆ. ಅವುಗಳಿಗೆ ತಲೆಬಾಗದೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಉನ್ನತಿ ಗಳಿಸಲು ಸಾಧ್ಯವಾಗಿದ್ದು ಮೂಲ್ಕಿಯ ವಿಜಯಾ ಬ್ಯಾಂಕ್ ಶಾಖೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯಲು ಕಾರಣ ಎಂದರು. ಈ ಸಂದರ್ಭ ವಿಜಯಾ ಬ್ಯಾಂಕ್ ಪ್ರಭಂದಕ ಉದಯ ಕುಮಾರ್ ಹೆಗ್ಡೆ ಹಾಗೂವಿಜಯಾ ರೈತ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ನಿರ್ದೇಶಕ ಅಜಯ್ ಗೌಡ ರವರವರನ್ನು ಅಧ್ಯಕ್ಷ ರಂಗನಾಥ ಶೆಟ್ಟಿ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷ ರಂಗನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಯದೀಶ್ ಅಮೀನ್ ಕೊಕ್ಕರಕಲ್, ಪ್ರಭಂದಕ ಸುಧಾಕರ ಶೆಟ್ಟಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Mulki-26041401

Comments

comments

Comments are closed.

Read previous post:
Mulki-26041402
ಎಸ್. ಸುರೇಶ್ ಕುಮಾರ್

ಮೂಲ್ಕಿ: ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎ.14 ಸೋಮವಾರ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಮೂಲ್ಕಿ ಗೇರುಕಟ್ಟೆ ನಿವಾಸಿ ಎಸ್....

Close