ಮಹಿಳಾ ಮತ್ತು ಯುವತಿ ಮಂಡಲ ವಾರ್ಷಿಕೋತ್ಸವ

 ಕಿನ್ನಿಗೋಳಿ : ಮಹಿಳೆಯರು ಮನೋಸ್ಥೈರ್ಯ ಹೆಚ್ಚಿಸಿ ಶೈಕ್ಷಣಿಕವಾಗಿ, ಅರ್ಥಿಕವಾಗಿ ಸದೃಡರಾಗಿ ಕಾರ್ಯತತ್ಪರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸುರಗಿರಿ ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ ಹೇಳಿದರು.
ಸುರಗಿರಿ ದೇವಳದಲ್ಲಿ ಶುಕ್ರವಾರ ನಡೆದ ಸುರಗಿರಿ ಮಹಿಳಾ ಮತ್ತು ಯುವತಿ ಮಂಡಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮೆನ್ನಬೆಟ್ಟು ಭ್ರಾಮರೀ ಮಹಿಳಾ ಮಂಡಲ ಅಧ್ಯಕ್ಷೆ ಮೀನಾಕ್ಷಿ ಧರ್ಮಾನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ವೈಧ್ಯಾಧಿಕಾರಿ ಭಗಿನಿ ಡಾ| ಲಿಲಿಯಾನ್ ಅವರನ್ನು ಸಮ್ಮಾನಿಸಲಾಯಿತು. ಜ್ಯೋತಿ ಜಿ. ಶೆಟ್ಟಿ ಪುನರೂರು, ಸಾವಿತ್ರಿ ಶೆಟ್ಟಿ , ಮೊPಸರ ಬಾಲಚಂದ್ರ ಭಟ್, ಯುವಕ ಮಂಡಲ ಅಧ್ಯಕ್ಷ ಸಚಿನ್ . ಕೆ. ಶೆಟ್ಟಿ , ಮಹಿಳಾ ಮಂಡಲ ಅಧ್ಯಕ್ಷೆ ಶಾರದಾ ಶೆಟ್ಟಿ ಉಪಸ್ಥಿತರಿದ್ದರು.
ಅಮಿತಾ ಶೆಟ್ಟಿ ಸ್ವಾಗತಿಸಿದರು. ಅನಿತಾ ಶೆಟ್ಟಿ ವರದಿ ವಾಚಿಸಿದರು. ನಿರ್ಮಲಾ ನಾಯಕ್ ಸಮ್ಮಾನ ಪತ್ರ ವಾಚಿಸಿದರು. ಪ್ರಮೀಳಾ ಶೆಟ್ಟಿ ವಂದಿಸಿದರು. ಪ್ರತಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-26041401

Comments

comments

Comments are closed.

Read previous post:
Kinnigoli-24041402
ಕಟೀಲು ವಸಂತ ವೇದ ಶಿಬಿರ

ಕಿನ್ನಿಗೋಳಿ : ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾರ್ಥಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು ಎಂದು ಹಿರಿಯ...

Close