ಕಿನ್ನಿಗೋಳಿ ವಿಶ್ವಬ್ರಾಹ್ಮಣ ವಾರ್ಷಿಕೋತ್ಸವ

ಕಿನ್ನಿಗೋಳಿ : ಚಿನ್ನ, ರಜತ, ಕಾಷ್ಟ, ಶಿಲೆಗಳಲ್ಲಿ ಶಾಸ್ತ್ರೀಯವಾಗಿ ಕೆಲಸ ಮಾಡುವ ವಿಶ್ವಕರ್ಮ ಸಮಾಜದ ಮಂದಿ ಅಧ್ಯಯನ, ತರಬೇತಿ ಕೇಂದ್ರಗಳ ಮೂಲಕ ಹೆಚ್ಚು ಸುದೃಢರಾಗುವಂತೆ ಮಾಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಈ ಸಮಾಜದ ಕುಲ ಕಸುಬುಗಳಿಗೆ ಈಗ ಬರುತ್ತಿರುವ ತಮಿಳುನಾಡು, ಕೇರಳ, ಬಿಹಾರಗಳ ಮಂದಿಯಿಂದ ಶಾಸ್ತ್ರವಷ್ಟೇ ಅಲ್ಲ, ಇಲ್ಲಿನ ಜ್ಞಾನವಿಲ್ಲದ ಬೇರೆಯದ್ದೇ ಶೈಲಿಯನ್ನು ರಥ, ಬಾಗಿಲು ಮುಂತಾದ ಕಡೆಗಳಲ್ಲಿ ಕಾಣಬೇಕಾಗಬಹುದೆಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಭಾನುವಾರ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಾಷ್ಟಶಿಲ್ಪಿ ಸಾಣೂರು ಪದ್ಮನಾಭ ಆಚಾರ್ಯ, ತಿಮ್ಮಪ್ಪ ಸಿ.ಶೆಟ್ಟಿ ಮುಂಬೈ, ಎಸ್.ಅಚ್ಯುತ ಮಲ್ಯ, ನಿಶ್ಮಿತಾ ಜಿ.ಆಚಾರ್ಯ,ರಚನಾರನ್ನು ಸಂಮಾನಿಸಲಾಯಿತು.
ಲೋಕೇಶ್ ಆಚಾರ್ಯ ಪುಂಜಾಲ್‌ಕಟ್ಟೆ, ಡಾ.ಸೋಂದಾ ಭಾಸ್ಕರ ಭಟ್, ವೀಣಾ ಆಚಾರ್ಯ, ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿನೇಶ್ ಆಚಾರ್ಯ, ಸಭಾಭವನ ಸಮಿತಿಯ ಪೃಥ್ವಿರಾಜ್ ಆಚಾರ್ಯ, ರತ್ನಾ ಪ್ರಭಾಕರ ಆಚಾರ್ಯ ಮತ್ತಿತರರಿದ್ದರು. ಕೆ.ಬಿ.ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli27041402

Comments

comments

Comments are closed.

Read previous post:
Mulki-26041401
ಮೂಲ್ಕಿ: ಬೀಳ್ಕೋಡುಗೆ ಸಮಾರಂಭ

ಮೂಲ್ಕಿ: ಪ್ರಾಮಾಣಿಕ ಕಾರ್ಯ ನಡೆಸಿದಲ್ಲಿ ಮಾತ್ರ ಸಾಧನೆಯ ಉತ್ತುಂಗವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಮೂಲ್ಕಿ ವಿಜಯಾ ಬ್ಯಾಂಕ್ ಪ್ರಭಂದಕ ಉದಯ ಕುಮಾರ್ ಹೆಗ್ಡೆ ಹೇಳಿದರು. ಮೂಲ್ಕಿ ವಿಜಯಾ...

Close