ನಿಡ್ಡೋಡಿ ನೂತನ ಪದಾಧಿಕಾರಿಗಳ ಪದಗ್ರಹಣ

ಮೂಲ್ಕಿ: ಯುವ ಪೀಳಿಗೆಯನ್ನು ಸಂಘಟಿತರನ್ನಾಗಿಸಿ ಪ್ರದೇಶದ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಉತ್ತಮ ತರಬೇತಿ ನೀಡುವ ಮೂಲಕ ವಿದ್ಯೆ ಉದ್ಯೋಗ ಗಳಿಸುವಲ್ಲಿ ಸಹಕರಿಸುವ ಯುವವಾಹಿನಿಯ ಕಾರ್ಯ ಸ್ತುತ್ಯರ್ಹ ಎಂದು ನಿಡ್ಡೋಡಿ ಶ್ರೀ ನಾರಾಯಣ ಗುರು ಪ್ರಸಾದಿತ ಸಂಘದ ಅಧ್ಯಕ್ಷ ವೆಂಕಪ್ಪ ಕೋಟ್ಯಾನ್ ಮೇಲ್ದಬೆಟ್ಟು ಹೇಳಿದರು.
ಭಾನುವಾರ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಯುವವಾಹಿನಿ ನಿಡ್ಡೋಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
,ನೂತನ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಸುಂದರ ಮತ್ತು ತಂಡವನ್ನು ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೀವ ಪೂಜಾರಿ ಪದಗ್ರಹಣಗೊಳಿಸಿದರು. ಅತಿಥಿಗಳಾಗಿ ಕೇಂದ್ರ ಸಮಿತಿಕೋಶಾಧಿಕಾರಿ ಉದಯ ಅಮೀನ್ ಮಟ್ಟು,ನಿಕಟಪೂರ್ವ ಅಧ್ಯಕ್ಷ ಲೋಕನಾಥ ಸಾಲ್ಯಾನ್ ಬಟ್ರಬೈಲು,ಕಾರ್ಯದರ್ಶಿ ಸುಧಾಕರ, ನಾರಾಯಣ ಪೂಜಾರಿ, ಸುಂದರ, ಹರೀಂದ್ರ ಸುವರ್ಣ, ಪದ್ಮನಾಭ ಮರೋಳಿ, ಸಂಜೀವ ಸುವರ್ಣ ಉಪಸ್ಥಿತರಿದ್ದರು. ಅಶ್ವಥ್ ಕಾರ್ಯಕ್ರಮ ನಿರೂಪಿಸಿದರು. ಸುಂದರ ವಂದಿಸಿದರು.

Kinnigoli28041401

Comments

comments

Comments are closed.

Read previous post:
ಕಿನ್ನಿಗೋಳಿ ವಿಶ್ವಬ್ರಾಹ್ಮಣ ವಾರ್ಷಿಕೋತ್ಸವ

ಕಿನ್ನಿಗೋಳಿ : ಚಿನ್ನ, ರಜತ, ಕಾಷ್ಟ, ಶಿಲೆಗಳಲ್ಲಿ ಶಾಸ್ತ್ರೀಯವಾಗಿ ಕೆಲಸ ಮಾಡುವ ವಿಶ್ವಕರ್ಮ ಸಮಾಜದ ಮಂದಿ ಅಧ್ಯಯನ, ತರಬೇತಿ ಕೇಂದ್ರಗಳ ಮೂಲಕ ಹೆಚ್ಚು ಸುದೃಢರಾಗುವಂತೆ ಮಾಡುವ ಅಗತ್ಯವಿದೆ....

Close