ಬಳ್ಕುಂಜೆ ವಾರ್ಷಿಕೋತ್ಸವ, ಸಮ್ಮಾನ

ಕಿನ್ನಿಗೋಳಿ: ಮೂಲ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಯುವ ಜನತೆಗೆ ಗುರು, ಹಿರಿಯರು ಸಂಸ್ಕಾರದ ಅರಿವು ನೀಡಬೇಕಾಗಿದೆ ಎಂದು ಕೇಮಾರು ಸಾಂದೀಪನಿ ಕ್ಷೇತ್ರದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಭಾನುವಾರ ಬಳ್ಕುಂಜೆ ಶ್ರೀ ವಿಠೋಭ ರಖುಮಾಯೀ ಭಜನಾ ಮಂದಿರ 24 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ 66 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಬಳಕುಂಜೆ ಬಂಡಸಾಲೆ ಡಾ| ಬಾನುತೇಜ ಅಜಿಲ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕವತ್ತಾರು ದೇವಳ ಅರ್ಚಕ ಅನಂತ ಪದ್ಮನಾಭ ಭಟ್, ಶತಾಯುಷಿ ಜೋಸೆಪ್ ಮಿನೇಜಸ್, ಮೆಸ್ಕಾಂ ಇಲಾಖೆಯ ಡಿ. ಕೃಷ್ಣ ಕೋಟ್ಯಾನ್ ಹಾಗೂ ಬಾಲ ಪ್ರತಿಭೆಗಳಾದ ಕೆರೋಲಿನ್ ಕ್ರಿಸ್ ಡಿಸೋಜ, ಕನ್ನಿಕಾ ಗೌಡರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಸಂಸ್ಕ್ರತ ಕಾಲೇಜು ಉಪನ್ಯಾಸಕ ಡಾ| ಸೋಂದಾ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.
ದಯಾ ಶಂಕರ ಬಂಡಸಾಲೆ, ಬಳ್ಕುಂಜೆ ಚರ್ಚ್ ಧರ್ಮಗುರು ಫಾ| ಮೈಕಲ್ ಡಿ.ಸಿಲ್ವ , ಕರ್ನಿರೆ ಮಸೀದಿ ಖತೀಬರಾದ ಪಿ. ಪಿ. ಅಹಮ್ಮದ್ ಸಖಾಪಿ ಕಾಶಿಪಟ್ನ , ಸುಬ್ರಹ್ಮಣ್ಯ ಭಟ್, ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಮಲ್ಲಿಕಾ ಶೆಟ್ಟಿ ಬಳ್ಕುಂಜೆ ಗುತ್ತು, ಕಾರ್ಯದರ್ಶಿ ರಶ್ಮಿ ಆಚಾರ್ಯ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ , ರಾಜೀವಿ ಕೋಟ್ಯಾನ್, ಯೋಗೀಶ್ ಆಚಾರ್ಯ ಉಪಸ್ಥಿತರಿದ್ದರು.
ವಿಠೋಭ ರಖುಮಾಯೀ ಭಜನಾ ಮಂದಿರ ಅಧ್ಯಕ್ಷ ಬಿ. ದಿನಕರ ಶೆಟ್ಟಿ ಸ್ವಾಗತಿಸಿ ವನಿತಾ ವಂದಿಸಿದರು. ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು.

Kinnigoli 27041402

Comments

comments

Comments are closed.

Read previous post:
Kinnigoli 27041401
ಸಮಾಜದ ಅಭಿವೃದ್ದಿಗೆ ನಾಂದಿ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಸೇವಾ ಮನೋಭಾವನೆಯಿಂದ ಬಡವರಿಗೆ ಆರ್ಥಿಕ ಸಹಾಯ ಮಾಡಿದಲ್ಲಿ ಸಮಾಜದ ಅಭಿವೃದ್ಧಿಗೆ ನಾಂದಿಯಾಗಬಲ್ಲುದು. ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉiನಾಥ ಕೋಟ್ಯಾನ್ ಹೇಳಿದರು. ಭಾನುವಾರ...

Close