ಸಮಾಜದ ಅಭಿವೃದ್ದಿಗೆ ನಾಂದಿ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಸೇವಾ ಮನೋಭಾವನೆಯಿಂದ ಬಡವರಿಗೆ ಆರ್ಥಿಕ ಸಹಾಯ ಮಾಡಿದಲ್ಲಿ ಸಮಾಜದ ಅಭಿವೃದ್ಧಿಗೆ ನಾಂದಿಯಾಗಬಲ್ಲುದು. ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉiನಾಥ ಕೋಟ್ಯಾನ್ ಹೇಳಿದರು.
ಭಾನುವಾರ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆದ ಎಳತ್ತೂರು ಫೆಂಡ್ಸ್ ಕ್ಲಬ್ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ನಿವೃತ ಶಿಕ್ಷಕ ರಾಘವೇಂದ್ರ ಭಟ್, ನೇಕಾರ ವೃತ್ತಿಯ ಲಕ್ಷ್ಮೀ ಶೆಟ್ಟಿಗಾರ್ತಿ, ಎಂಜಿನಿಯರ್ ರಿಝ್ವಾನ್, ಎಲೆಕ್ಟ್ರಿಕಲ್ ಸೂಪರ್ ವೈಸರ್ ಶ್ರೀನಿವಾಸ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ , ಗ್ರಾ. ಪಂ, ಸದಸ್ಯ ಸಂತಾನ್ ಡಿಸೋಜ, ಉದ್ಯಮಿ ದಿನೇಶ್ ಶೆಟ್ಟಿ ತಾಳಿಪಾಡಿಗುತ್ತು, ಎಳತ್ತೂರು ಫೆಂಡ್ಸ್ ಕ್ಲಬ್ ಅಧ್ಯಕ್ಷ ಪವನ್ ಕುಮಾರ್ ಶೆಟ್ಟಿ , ನಿಯೋಜಿತ ಅಧ್ಯಕ್ಷ ಶ್ಯಾಮ್ ಸುಂದರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀದರ ಡಿ. ಎಸ್ ಅಭಿನಂದನಾ ಭಾಷಣಗೈದರು. ಶಶಿಕಾಂತ್ ರಾವ್ ಸ್ವಾಗತಿಸಿ ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli 27041401

Comments

comments

Comments are closed.

Read previous post:
ಎಳತ್ತೂರು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಗುತ್ತಿನಲ್ಲಿ ಕುಟುಂಬಸ್ಥರು ಆರಾಸಿಕೊಂಡು ಬಂದಿರುವ ಮೈಸಂದಾಯ, ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ , ಬ್ರಹ್ಮಕಲಶೋತ್ಸವ ಹಾಗೂ ಧರ್ಮ ನೇಮೋತ್ಸವದ...

Close