ಮೇ 16 ಪುನರೂರು ರಾಶಿ ಪೂಜಾ ಮಹೋತ್ಸವ

ಕಿನ್ನಿಗೋಳಿ : ಮುಲ್ಕಿ ಸೀಮೆಯ ಒಂಭತ್ತು ಮಾಗಣೆಗೆ ಒಳಪಟ್ಟಿರುವ ಮೂವತ್ತು ಗ್ರಾಮಗಳಲ್ಲಿರುವ ದೇವಳಗಳಲ್ಲಿ ಇತ್ತಿಚಿನ ಐವತ್ತು ಆರುವತ್ತು ವರ್ಷಗಳಿಂದೀಚೆಗೆ ನಡೆಯದೆ ಇರುವಂತಹ ಅಪರೂಪದ ಹಾಗೂ ವೈಭವಪೂರ್ಣ ರಾಶಿಪೂಜಾ ಮಹೋತ್ಸವ ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮೇ 16 ಶುಕ್ರವಾರದಂದು ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
ರಾಶಿ ಪೂಜೆಗೆ ಪೂರ್ವಭಾವಿಯಾಗಿ ಮೇ 12 ಸೋಮವಾರ ಬೆಳಿಗ್ಗೆ ಶ್ರೀರಸ್ತು ಮುಹೂರ್ತ, ಮುಷ್ಠಿ ಕಾಣಿಕೆ , ಮೇ 15 ಗುರುವಾರ ಬೆಳಿಗ್ಗೆ ಶ್ರೀ ವಿಶ್ವನಾಥ ದೇವರಿಗೆ ಮಹಾರುದ್ರಯಾಗ, ಮಹಾಗಣಪತಿ ದೇವರಿಗೆ ಗಣಯಾಗ ನಡೆಯಲಿದೆ. ಸಂಜೆ 3.30 ಕ್ಕೆ ಊರ ಪರವೂರ ಭಕ್ತಾಧಿಗಳು ಹಾಗೂ ವಿಪ್ರ ಸಂಪದ ಪುನರೂರುರವರ ನೇತೃತ್ವದಲ್ಲಿ ಎಸ್. ಕೋಡಿಯಿಂದ ದೇವಳದ ತನಕ ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಮೇ 16 ಶುಕ್ರವಾರ ಬೆಳಿಗ್ಗೆ ಸೂರ್ಯೋದಯದಿಂದ ರಾಶಿಪೂಜಾ ಮಹೋತ್ಸವವು ವೃಷಭ ರಾಶಿಪೂಜೆಯಿಂದ ಪ್ರಾರಂಭಗೊಂಡು ಮೇ 17 ರಂದು ಶನಿವಾರ ಬೆಳಿಗ್ಗೆ ಸೂರ್ಯೋದಯದವರೆಗೆ ನಡೆಯಲಿದೆ.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ರಾಶಿಪೂಜಾ ಸಮಿತಿ ಕಾರ್ಯಾಧ್ಯಕ್ಷ ಸುರೇಶ ರಾವ್ ನೀರಳಿಕೆ, ಕೆ. ಭುವನಾಭಿರಾಮ ಉಡುಪ, ರವಿ ಶೆಟ್ಟಿ ಪುನರೂರು ಗುತ್ತು, ಪುರಂದರ ಶೆಟ್ಟಿಗಾರ್ ಉಪಸ್ಥಿತರಿದ್ದರು.

Comments

comments

Comments are closed.

Read previous post:
KInnigoli-02051401
ಶ್ರೀ ಮಹಮ್ಮಾಯಿ ದೇವಸ್ಥಾನ ವಾರ್ಷಿಕ ಮಾರಿಪೂಜೆ

ಕಿನ್ನಿಗೋಳಿ: ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಮಾರಿಪೂಜೆಯ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವಥ್ಥ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ

Close