ಸಿಡಿಲು ಬಡಿದು ದನ ಸಾವು

ಕಿನ್ನಿಗೋಳಿ : ಕಿನ್ನಿಗೋಳಿಯಲ್ಲಿ ಸೋಮವಾರ ಸಂಜೆ ಗುಡುಗು- ಸಿಡಿಲು ಸಹಿತ ಮಳೆ ಸುರಿದಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ ಭಂಡರ್ಕರ್ ಎಂಬವರ ಕೊಟ್ಟಿಗೆ ಸಮೀಪ ಸಿಡಿಲು ಬಡಿದು ದನವೊಂದು ಮೃತಪಟ್ಟಿದೆ. ಮನೆಯ ಹತ್ತಿರದ ಹಲಸಿನ ಮರ ಸಂಪೂರ್ಣ ಸೀಳಿಹೋಗಿದ್ದು ಕೊಟ್ಟಿಗೆ ಹಾನಿಯಾಗಿದೆ. ಗಣೇಶ ಭಂಡರ್ಕರ್ ದನವನ್ನು ಕೊಟ್ಟಿಗೆಗೆ ಕರೆದೊಯ್ಯುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತ ಜಾನುವಾರುವಿನ ಮೌಲ್ಯ ಸುಮಾರು 20000 ರೂ. ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಮತ್ತು ಪಂಚಾಯಿತಿ ಸದಸ್ಯರಾದ ಕೇಶವ ಕರ್ಕೆರ, ಸುನೀಲ್ ಸಿಕ್ವೇರಾ ಮತ್ತು ಗುರುರಾಜ್ ಮಲ್ಲಿಗೆಯಂಗಡಿ ಭೇಟಿ ನೀಡಿದರು.

Kinnigoli-05051406 Kinnigoli-05051405

Comments

comments

Comments are closed.

Read previous post:
Kinnigoli27041401
ಬಿಲ್ಲವ ವಧು-ವರಾನ್ವೇಷಣ ಸಮಾವೇಶ

ಮುಲ್ಕಿ: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇವರ ವತಿಯಿಂದ ಬಿಲ್ಲವ ವಧು-ವರಾನ್ವೇಷಣ ಸಮಾವೇಶವು ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ (ರಿ) ಇವರ ಸಹಕಾರದೊಂದಿಗೆ ಇತ್ತೀಚಿಗೆ ಮುಲ್ಕಿ ಶ್ರೀ ನಾರಾಯಣ...

Close