ಬಿಲ್ಲವ ವಧು-ವರಾನ್ವೇಷಣ ಸಮಾವೇಶ

ಮುಲ್ಕಿ: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇವರ ವತಿಯಿಂದ ಬಿಲ್ಲವ ವಧು-ವರಾನ್ವೇಷಣ ಸಮಾವೇಶವು ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ (ರಿ) ಇವರ ಸಹಕಾರದೊಂದಿಗೆ ಇತ್ತೀಚಿಗೆ ಮುಲ್ಕಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.

ನಿವೃತ್ತ ಶಿಕ್ಷಣಾಧಿಕಾರಿ, ಕೃಷಿಯಲ್ಲಿ ಪ್ರಶಸ್ತಿ ವಿಜೇತರು ಹಾಗೂ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಸಂಚಾಲಕ ಅಡುವೆ ರವೀಂದ್ರ ಪೂಜಾರಿ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನಾ ಭಾಷಣದಲ್ಲಿ ಸರಳ ವಿವಾಹಕ್ಕೆ ಸಮಾಜದ ಎಲ್ಲಾ ಬಂಧುಗಳು ಆದ್ಯತೆನ್ನು ನೀಡಬೇಕಾಗಿ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ ಇದರ ಅಧ್ಯಕ್ಷ ಯದೀಶ್ ಅಮೀನ್ ಮಾತನಾಡಿ, ಇದೊಂದು ಅತ್ಯಮೂಲ್ಯವಾದ ಹಾಗೂ ಶಿಸ್ತುಬದ್ಧವಾದ ಕಾರ್ಯಕ್ರಮವಾಗಿದ್ದು, ಇದರ ಸದುಪಯೋಗವನ್ನು ಸಮಾಜದ ಎಲ್ಲ ಬಂಧುಗಳು ಪಡೆದುಕೊಳ್ಳಲು ಉತ್ತೇಜನ ನೀಡಿದರು.
ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷ ಎಂ. ವೇದಕುಮಾರ್ ಮಾತನಾಡಿ, ಸಮಾಜದಲ್ಲಿ ಮದುವೆ ಹಾಗೂ ಮೆಹಂದಿ ಕಾರ್ಯಕ್ರಮಕ್ಕೆ ದುಂದು ವೆಚ್ಚ ಮಾಡದೆ, ನಾರಾಯಣ ಗುರುಗಳ ಆಶಯದಂತೆ ಸರಳ ವಿವಾಹಕ್ಕೆ ಎಲ್ಲರೂ ಒತ್ತು ಕೊಡಲು ಹಾಗೂ ಮದುವೆಯ ಸಮಾರಂಭದಲ್ಲಿ ಮಾಂಸಾಹಾರಿ ಭೋಜನವನ್ನು ನಿಷೇಧಿಸಲು ಎಲ್ಲರಿಗೂ ವಿನಂತಿಸಿದರು.
ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ವಧು-ವರಾನ್ವೇಷಣ ಸಮಿತಿಯ ಅಧ್ಯಕ್ಷೆ ಸುಶೀಲ ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ನ ಹಿರಿಯ ಉಪಾಧ್ಯಕ್ಷ ಭಾಸ್ಕರ್ ಸಿ ಅಮೀನ್, ಉಪಾಧ್ಯಕ್ಷೆ ಶಾರದಾಕೃಷ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ವಿ.ಗೋಪಾಲ್, ರೇಖಾ ಜಯರಾಮ್, ಭಾನುಮತಿ ಹಚ್. ಸಾಲಿಯಾನ್, ಯು.ಬಿ.ರವಿರಂಜನ್, ಸಂಜೀವ ಪೂಜಾರಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ,ಮುಲ್ಕಿ ವತಿಯಿಂದ ಕಾರ್ಯಕ್ರಮದ ಸಂಚಾಲಕರಾದ ಗೋಪಿನಾಥ್ ಪಡಂಗ, ಸುನೀತ ದಾಮೋದರ, ಉದಯ್ ಕುಮಾರ್, ನಾಗೇಂದ್ರ, ಹೆಚ್.ವಿ.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾರತಿ ಬೇಬಿ ಕುಂದರ್ ನಿರೂಪಿಸಿದರು ಹಾಗೂ ಭಾಸ್ಕರ್ ಸಿ.ಅಮೀನ್ ಧನ್ಯವಾದವಿತ್ತರು.

Kinnigoli27041401

Bhagyawan Sanil

Comments

comments

Comments are closed.

Read previous post:
Kinnigoli-04051403
ನೆಲ್ಲಿಗುಡ್ಡೆ ಕಲ್ಲಿನ ಕೋರೆ ಶೆಡ್‌ನಲ್ಲಿ ಸ್ಪೋಟ

ಕಿನ್ನಿಗೋಳಿ : ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಕೋರೆಯಲ್ಲಿನ ಶೆಡ್ ಮನೆಯಲ್ಲಿ ಸಂಶಯಾಸ್ಪದ ಸ್ಪೋಟಕ ಸಿಡಿದು ಇಬ್ಬರು ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಭಾನುವಾರ...

Close