ಪುನರೂರು ವೇದ ಪಾಠ ಶಿಬಿರ

ಕಿನ್ನಿಗೋಳಿ: ಮಕ್ಕಳಿಗೆ ಎಳವೆಯಲ್ಲಿಯೇ ಸನಾತನ ಸಂಸ್ಕೃತಿ ಆಚಾರ – ವಿಚಾರಗಳನೊಳಗೊಂಡ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವುದರಿಂದ ಸಂಸ್ಕಾರಯುತ ಭವ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಪುನರೂರು ವಿಪ್ರಸಂಪದ ಹಾಗೂ ಪುನರೂರು ದೇವಳದ ಸಹ ಭಾಗಿತ್ವದಲ್ಲಿ ನಡೆಯುತ್ತಿರುವ ವೇದ ಪಾಠ ಶಿಬಿರದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.
ಇತರ ಧರ್ಮ ಬಾಂಧವರಲ್ಲಿ ಮಕ್ಕಳಿಗೆ ಅವರವರ ಸ್ವಧರ್ಮದ ಪಾಠ ಪ್ರವಚನಗಳನ್ನು ನೀಡಲಾಗುತ್ತಿದ್ದು ನಮ್ಮಲ್ಲೂ ಶಾಲೆಯ ಪಾಠದ ಜೊತೆ ಇಂತಹ ಶಿಕ್ಷಣ ನೀಡುವ ಪರಿ ಪಾಠ ಮಾಡಿಕೊಳ್ಳಬೇಕು. ಎಂದು ಹೇಳಿದರು.
ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಸುಧಾಕರ ರಾವ್, ಅರವಿಂದ ಮವಂತೂರು, ಅರ್ಚಕ ಗುರುಮೂರ್ತಿ ಭಟ್, ರಾಮಮೂರ್ತಿ ಭಟ್, ರಾಜಶೇಖರ ರಾವ್, ದೇವದಾಸ ಶೆಟ್ಟಿಗಾರ್, ಸುಂದರ , ಶಿಬಿರದ ಗುರುಗಳಾದ ಸುದರ್ಶನ್, ವಿನಾಯಕ್ , ಜನಕ್‌ರಾಜ್ ಉಪಸ್ಥಿತರಿದ್ದರು.

Kinnigoli-05051414

Comments

comments

Comments are closed.

Read previous post:
Kinnigoli-05051413
ಯಕ್ಷಗಾನ ಸನ್ಮಾನ

ಕಿನ್ನಿಗೋಳಿ : ಖ್ಯಾತ ಯಕ್ಷಗಾನ ಕಲಾವಿದ ದಿ. ಶ್ರೀನಿವಾಸ ರಾವ್ ಕಟೀಲು ಸ್ಮರಣಾರ್ಥ ಉಲ್ಲಂಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡ್ರೆ ಕುಮಾರರನ್ನು ಹಾಗೂ ಯಕ್ಷಗಾನ ಕಲಾವಿದ ಗಣೇಶ್ ಚಂದ್ರಮಂಡಲ ಸನ್ಮಾನಿಸಲಾಯಿತು....

Close