ಪೋಲೀಸ್ ಅತಿಥಿಯಾದ ಬಸ್ ನಿರ್ವಾಹಕ !!

ಮೂಲ್ಕಿ:  ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸಿನ ನಿರ್ವಾಹಕನೊಬ್ಬ ಯುವತಿ ಜತೆ ಅಸಭ್ಯ ವರ್ತಿಸಿದ್ದಕ್ಕಾಗಿ ಪೋಲೀಸರ ಅತಿಥಿಯಾದ ಘಟನೆ ನಿನ್ನೆ ನಡೆದಿದೆ. ಮಂಗಳೂರಿನಿಂದ ಕಿನ್ನಿಗೋಳಿಗೆ ಬರುತ್ತಿದ್ದ ಮರೋಳಿ ಎಂಬ ಹೆಸರಿನ ಬಸ್ಸಿನ ನಿರ್ವಾಹಕ ಸುಳ್ಯ ಸಮೀಪದ ಮಂಡೆಕ್ಕೋಲು ನಿವಾಸಿ ಸೀತಾರಾಮ ಗೌಡ (52) ಎಂಬಾತ ಕೂಳೂರು ಸಮೀಪಿಸುತ್ತಿದ್ದಂತೆ ಯುವತಿ ಜತೆ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದು ಕೂಡಲೇ ಯುವತಿ ಜಾಗೃತಳಾಗಿ ಫೋನ್ ಮೂಲಕ ಸಂಬಂದಪಟ್ಟವರಿಗೆ ತಿಳಿಸಿದ್ದಾಳೆ. ಬಸ್ಸು ಕಿನ್ನಿಗೋಳಿಗೆ ತಲುಪುವ ಮುಂಚೆಯೇ ಯುವತಿಯ ಮನೆಯವರು ನಿರ್ವಾಹಕನಿಗೆ ಗೂಸಾ ಇಕ್ಕಲೆಂದು ಕಾಯುತ್ತಿದ್ದು ವಿಷಯ ತಿಳಿದ ಮೂಲ್ಕಿ ಪೋಲೀಸರು ಜಾಗೃತರಾಗಿ ಬಸ್ಸು ಹಾಗೂ ನಿರ್ವಾಹಕರನ್ನು ವಶಪಡಿಸಿಕೊಂಡು ಕೇಸು ದಾಖಲಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Puneeth Krishna

Comments

comments

Comments are closed.

Read previous post:
Kinnigoli-07051404
ಮೇ 9 ಶ್ರೀ ರಾಮ ಜನ್ಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಿನ್ನಿಗೋಳಿ ಜಿಎಸ್‌ಬಿ ಸಮಾಜ ಹಾಗೂ ಸಚ್ಚಿದಾನಂದ ವಿಷ್ಣು ಭಟ್ ಅವರ ಸಹಯೋಗದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ...

Close